ಸೆಕ್ಯುರಿಟಿ ಪರಿಶೀಲನೆ ವೇಳೆ ಮಶಿನ್’ನಲ್ಲಿ ಬ್ಯಾಗ್’ನೊಂದಿಗೆ ತಾನೂ ಕುಳಿತ ಮಹಿಳೆ

Woman refuses to let go of valuable handbag during Security Check climbs into machine with it
Highlights

ಚೀನಾದಲ್ಲಿ ಮಹಿಳೆಯೋರ್ವಳು ತನ್ನ ಬ್ಯಾಗ್’ನ್ನು ಪರೀಕ್ಷೆಗೆಂದು ಇಡುವ ಮಶಿನ್’ನಲ್ಲಿ ಇರಿಸಲು ಒಪ್ಪದೇ ತಾನೇ ಆ ಮಶಿನ್’ನಲ್ಲಿ ಕುಳಿತ ಘಟನೆ ನಡೆದಿದೆ.

ಬೀಜಿಂಗ್: ಚೀನಾದಲ್ಲಿ ಮಹಿಳೆಯೋರ್ವಳು ತನ್ನ ಬ್ಯಾಗ್’ನ್ನು ಪರೀಕ್ಷೆಗೆಂದು ಇಡುವ ಮಶಿನ್’ನಲ್ಲಿ ಇರಿಸಲು ಒಪ್ಪದೇ ತಾನೇ ಆ ಮಶಿನ್’ನಲ್ಲಿ ಕುಳಿತ ಘಟನೆ ನಡೆದಿದೆ.

ದಕ್ಷಿಣ ಚೀನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕಪ್ ವೇಳೆ ನಂಬಿಕೆ ಇಲ್ಲದೇ ಮಹಿಳೆ ಬ್ಯಾಗಿನೊಂದಿಗೆ ತಾನೆ ಮಶಿನ್ ಒಳಗೆ ಹತ್ತಿ ಕುಳಿತಿದ್ದಾಳೆ.

ಒಂದು ಸೂಟ್ ಕೇಸ್ ಹಾಗೂ ಒಂದು ಚಿಕ್ಕ ಬ್ಯಾಗನ್ನು ಇಟ್ಟುಕೊಂಡಿದ್ದ ಮಹಿಳೆಗೆ ಮಶಿನ್’ನಲ್ಲಿ ಇಡಲು ಸೂಚಿಸಲಾಗಿದೆ. ಈ ವೇಳೆ ಆಕೆ ತನ್ನ ಕೈಯಲ್ಲಿದ್ದ ಸೂಟ್ ಕೇಸನ್ನು ಮಶಿನ್’ನಲ್ಲಿ ಇರಿಸಿದ್ದಾಳೆ.

ಈ ವೇಳೆ ಚಿಕ್ಕ ಬ್ಯಾಗನ್ನೂ ಕೂಡ ಮಶಿನ್’ನಲ್ಲಿ ಪರಿಶೀಲನೆಗೆಂದು ಇಡಬೇಕು ಎಂದು ಸೂಚಿಸಿದ್ದಾರೆ. ಆದರೆ ಅದಕ್ಕೊಪ್ಪದ ಆಕೆ ಬ್ಯಾಗ್’ನೊಂದಿಗೆ ತಾನೂ ಮಶಿನ್’ನಲ್ಲಿ ಹತ್ತಿ ಕುಳಿತುಕೊಂಡಿದ್ದಾಳೆ.

loader