ಮೃತ ಗೃಹಿಣಿ ಹಾಗೂ ಪತಿ ಹಲವು ದಿನಗಳಿಂದ ಸೊಂಪುರ ಗೇಟ್ ಬಳಿ ನೆಲೆಸಿದ್ದರು. ನೇಪಾಲ ಮೂಲದ 26 ವರ್ಷದ ಆರೋಪಿ ತಿಲಕ್ ಕೃತ್ಯ ಎಸಗಿ ಪವಿತ್ರ ದೇಹವನ್ನು ಮನೆಯ ಪಕ್ಕದಲ್ಲೆ ಹೂತಿಟ್ಟು ಪರಾರಿಯಾಗಿದ್ದಾನೆ.
ಬೆಂಗಳೂರು (ಮೇ.16): ನೇಪಾಳ ಮೂಲದ ಗೃಹಿಣಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರುವ ಘಟನೆವೊಂದು ಬೆಂಗಳೂರು ಹೊರವಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್ ಬಳಿ ಈ ಪ್ರಕರಣ ನಡೆದಿದೆ.
ಮೃತ ಗೃಹಿಣಿ ಹಾಗೂ ಪತಿ ಹಲವು ದಿನಗಳಿಂದ ಸೊಂಪುರ ಗೇಟ್ ಬಳಿ ನೆಲೆಸಿದ್ದರು. ನೇಪಾಲ ಮೂಲದ 26 ವರ್ಷದ ಆರೋಪಿ ತಿಲಕ್ ಕೃತ್ಯ ಎಸಗಿ ಪವಿತ್ರ ದೇಹವನ್ನು ಮನೆಯ ಪಕ್ಕದಲ್ಲೆ ಹೂತಿಟ್ಟು ಪರಾರಿಯಾಗಿದ್ದಾನೆ.
ಮೇ 4 ರಂದು ಘಟನೆ ನಡೆದಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಮೃತ ಮಹಿಳೆಯ ಪತಿ ಕಾಣೆಯಾಗಿರುವ ದೂರು ನೀಡಿದ್ದರು. ಸರ್ಜಾಪುರ ಪೊಲೀಸರ ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸರ್ಜಾಪುರ ಪೊಲೀಸರು ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.