ಅದೇನಾಗಿತ್ತೋ ಗೊತ್ತಿಲ್ಲ. ಪಾಪ ಈ ಮಹಿಳೆ ಮಾತ್ರ ಇದೀಗ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಲೈಂಗಿಕ ಕ್ರಿಯೆ ವೇಳೆಯೇ ಬೆನ್ನು ಮೂಳೆ ಮುರಿದುಕೊಂಡಿದ್ದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಏನಿದು ಸುದ್ದಿ?? ಮುಂದೆ ಓದಿ...

ಲಂಡನ್[ಅ.17] ಬ್ರಿಟನ್ ಮಹಿಳೆಯೊಬ್ಬರು ಹಾಸಿಗೆ ತಯಾರಕ ಕಂಪನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಲೈಂಗಿಕ ಕ್ರಿಯೆ ವೇಳೆ ಬೆನ್ನು ಮೂಳೆ ಮುರಿದಿದೆ. ಇದಕ್ಕೆ ಹಾಸಿಗೆ ತಯಾರಕ ಕಂಪನಿಯ ಅವೈಜ್ಞಾನಿಕ ಶೈಲಿಯೇ ಕಾರಣ ಎಂಬುದು ಮಹಿಳೆಯ ಆರೋಪ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2013ರಲ್ಲೇ ಘಟನೆ ನಡೆದಿದೆ. 46 ವರ್ಷದ ಕ್ಲಾರಿಯೋ ಬಬ್ಸಿ ತನ್ನ ಸಂಗಾತಿಯೊಡನೆ ಏಕಾಂತದಲ್ಲಿದ್ದಾಗ ದುರ್ಘಟನೆ ಸಂಭವಿಸಿದೆ. ಪೊಜಿಸನ್ ಬದಲಾಯಿಸುವ ವೇಳೆ ಹಾಸಿಗೆ ಮುರಿದಿದ್ದು ನ್ಯಾಯ ಕೊಡಿಸಬೇಕು ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.

ಸೆಕ್ಸ್‌ ವೇಳೆ ಕಾಂಡೋಮ್ ಸ್ಫೋಟ, ಪಾಪ ಗ್ರಾಹಕ!

ಹಾಸಿಗೆ ಮುರಿದು ಬೀಳುವಾಗ ನಾನು ಕೈ ನೆಲಕ್ಕೆ ಊರಲು ಯತ್ನಿಸಿದೆ. ಆದರೆ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ತಲೆ ನೆಲಕ್ಕೆ ಅಪ್ಪಳಿಸಿತು. ನನ್ನ ಬೆನ್ನು ಮೂಳೆ ಮುರಿಯಿತು ಎಂದು ಹೇಳಿಕೆ ನೀಡಿದ್ದಾರೆ.

ಮಹಿಳೆಯ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬೆಡ್ ಆರ್ ಯೂಜ್ ಈ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಮಹಿಳೆ ಹೇಳುವ ಪ್ರಕಾರ ಬೆಡ್ ನಲ್ಲಿ ತೊಂದರೆಯಿದ್ದು ಭದ್ರತೆಯ ಸಂಪೂರ್ಣ ಬೋಲ್ಟ್ ಗಳನ್ನು ಫಿಟ್ ಮಾಡಿರಲಿಲ್ಲ, ಇದೆ ಅವಘಡಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.