ಪೊಲೀಸರಿಗೆ ದಂಡ ಕಟ್ಟಲು ಹಣವಿಲ್ಲದೆ ಅನಾರೋಗ್ಯ ಪೀಡಿತ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ನೀಡಲು ಮುಂದಾದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಡ್ಡ ಹಳ್ಳಿ ಸಮೀಪ ಬುಧವಾರ ನಡೆದಿದೆ.

ಪಾವಗಡ: ಪೊಲೀಸರಿಗೆ ದಂಡ ಕಟ್ಟಲು ಹಣವಿಲ್ಲದೆ ಅನಾರೋಗ್ಯ ಪೀಡಿತ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ನೀಡಲು ಮುಂದಾದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಡ್ಡ ಹಳ್ಳಿ ಸಮೀಪ ಬುಧವಾರ ನಡೆದಿದೆ.

ತಾಲೂಕಿನ ಭೂಪೂರು ತಾಂಡದ ಕಾವೇರಿ ಬಾಯಿ ಅವರಿಗೆ ಅನಾರೋಗ್ಯವಿದ್ದು ಬುಧವಾರ ತಮ್ಮ ಸಂಬಂಧಿಕರ ನಾಲ್ಕು ಬೈಕ್‌ಗಳಲ್ಲಿ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್‌ ಬರುವಾಗ ದೊಡ್ಡಹಳ್ಳಿಯ ಶಾಲೆ ಬಳಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಇವರ ಬೈಕ್‌ಗಳನ್ನು ಹಿಡಿದಿದ್ದಾರೆ.

ಬೈಕ್‌ಗಳ ದಾಖಲೆ ಹಾಗೂ ಹೆಲ್ಮೆಟ್‌ ಇಲ್ಲದ ಕಾರಣ ಪೊಲೀಸರು ಎರಡು ಬೈಕ್‌ಗಳಿಗೆ ರೂ.200 ದಂಡ ವಿಧಿಸಿದ್ದಾರೆ. ಆಗ ಕಾವೇರಿ ಬಾಯಿ ಮಾಂಗಲ್ಯ ಕೊಟ್ಟಿದ್ದಾರೆ.