ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ, ಅಷ್ಟರಲ್ಲೇ ಬಿತ್ತು ಗೋಡೆ| ಮುಂದೇನಾಯ್ತ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಸಿಸಿಟಿವಿ ದೃಶ್ಯ
ಬೀಜಿಂಗ್[ಜು.16]: ಚೀನಾದಲ್ಲಿ ನಡೆದ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಹೌದು ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಗೋಡೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಆಕೆ ಕೂಡಲೇ ಅಲ್ಲಿಂದ ದೂರ ಸರಿದು ನಿಂತ ಪರಿಣಾಮ ಯವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಅಲ್ಲಿ ನಿಲ್ಲಿಸಲಾಗಿದ್ದ ಕಾರುಗಳೆಲ್ಲಾ ಜಖಂಗೊಂಡಿವೆ.
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತಾಗಿ CGTN ವರದಿ ಮಾಡಿದೆ. ಬುಧವಾರದಂದು ಚೀನಾದ ಗಂಜವ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ನೀರಿನ ಪೈಪ್ ಸೋರಿಕೆಯಿಂದ ಗೋಡೆ ಶಿಥಿಲಗೊಂಡು ಇದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲೂ ಇಂತಹುದೇ ಘಟನೆ ಸಂಭವಿಸಿದ್ದು, 6 ತಿಂಗಳ ಪುಟ್ಟ ಮಗುವೊಂದು ಅದೃಷ್ಟವಶಾತ್ ಪಾರಾಗಿತ್ತು.
