ಅಂಗನವಾಡಿ ಕಾರ್ಯಕರ್ತೆಯ ಜೊತೆ ಯೋಗಿ ಆದಿತ್ಯನಾಥ್ ವಿವಾಹ !

First Published 6, Dec 2017, 9:29 PM IST
Woman marries Uttar Pradesh CM Yogi Adityanath to highlight plight of Anganwadi workers
Highlights

ಸೀತಾಪುರದಲ್ಲಿ ಅಂಗನವಾಡಿ ಪ್ರತಿಭಟನೆಯಲ್ಲಿ ಆದಿತ್ಯನಾಥ್‌ರ ಮುಖವಾಡ ಧರಿಸಿದ ಕಾರ್ಯಕರ್ತೆಯೊಬ್ಬರು, ವಧುವಂತೆ ನಟಿಸಿದ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್‌ಗೆ ತಾಳಿ ಕಟ್ಟಿ ಸಾಂಕೇತಿಕ ಮದುವೆ ನಡೆಯಿತು.

ಲಖನೌ(ಡಿ.06): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ವಿವಾಹವಾಗಿದೆ ಎಂದರೆ ನಂಬುತ್ತೀರಾ? ಬಹುಶಃ ನಂಬಬೇಕಾಗಿಯೂ ಇಲ್ಲ, ಆದರೂ ಇಂತದ್ದೊಂದು ಮದುವೆಯಾಗಿದೆ.

ಆದರೆ ಇದು ಉ.ಪ್ರ.ದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನಡೆಸಿದ ನಕಲಿ ಮದುವೆ. ಸೀತಾಪುರದಲ್ಲಿ ಅಂಗನವಾಡಿ ಪ್ರತಿಭಟನೆಯಲ್ಲಿ ಆದಿತ್ಯನಾಥ್‌ರ ಮುಖವಾಡ ಧರಿಸಿದ ಕಾರ್ಯಕರ್ತೆಯೊಬ್ಬರು, ವಧುವಂತೆ ನಟಿಸಿದ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್‌ಗೆ ತಾಳಿ ಕಟ್ಟಿ ಸಾಂಕೇತಿಕ ಮದುವೆ ನಡೆಯಿತು. ಆದಿತ್ಯನಾಥ್ ಶುಕ್ರವಾರ ಸೀತಾಪುರಕ್ಕೆ ಆಗಮಿಸಲಿದ್ದು, ಅವರೊಂದಿಗೆ ಲಖನೌಗೆ ತೆರಳುತ್ತೇನೆ. ಬೇಡಿಕೆ ಈಡೇರದಿದ್ದಲ್ಲಿ ಕುದುರೆಯ ಮೇಲೆ ತೆರಳುತ್ತೇನೆ ಎಂದು ನೀತು ಸಿಂಗ್ ಹೇಳಿದ್ದಾರೆ.

loader