ನವದೆಹಲಿ, (ಜೂನ್.09): ನವದೆಹಲಿಯ ಜಹಾಂಗೀರ್ ಪುರಿ ಮೆಟ್ರೋ ನಿಲ್ದಾಣದ ಬಳಿ ರುಂಡವಿಲ್ಲದ ಮಹಿಳೆಯ ಮೃತ ದೇಹ ಪತ್ತೆಯಾಗಿದೆ.

ಮಹಿಳೆಯ ದೇಹವನ್ನು ಒಂದು ಹೊದಿಕೆಯಿಂದ ಸುತ್ತಿದ್ದು, ಮೆಟಲ್ ಟ್ರಂಕ್‍ನಲ್ಲಿ ತುಂಬಿ ಮೆಟ್ರೋ ನಿಲ್ದಾಣದಲ್ಲಿದ ಬಳಿ ಇಟ್ಟು ಹೋಗಿದ್ದಾರೆ.

ಸ್ಥಳೀಯರು ಓಡಾಡುವಾಗ ಆ ಟ್ರಂಕ್ ಕಂಡುಬಂದಿದ್ದು, ಅನುಮಾನದ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಟ್ರಂಕ್ ಓಪನ್ ಮಾಡಿ ನೋಡಿದ್ದಾರೆ. ಆಗ ಒಳಗೆ ತಲೆಯಿಲ್ಲದ ಮಹಿಳೆಯ ದೇಹ ಪತ್ತೆಯಾಗಿದೆ.

 ಈ ಘಟನೆಯ ಬಗ್ಗೆ ಫೋರೆನ್ಸಿಕ್ ಕ್ರೈಂ ಬ್ರ್ಯಾಂಚ್‍ಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಫೋರೆನ್ಸಿಕ್ ತಂಡ ಟ್ರಂಕ್ ಮೇಲಿದ್ದ ಫಿಂಗರ್ ಪ್ರಿಂಟ್‍ಗಳನ್ನು ತೆಗೆದುಕೊಂಡಿದ್ದಾರೆ.

ಮಹಿಳೆಯನ್ನು ಎರಡು-ಮೂರು ದಿನಗಳ ಹಿಂದೆಯೇ ಕೊಲೆ ಮಾಡಲಾಗಿದೆ. ಮೃತ ಮಹಿಳೆಯ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆ. ಜತೆಗೆ ದೇಹವು ಕೊಳೆತಿರುವ ಹಂತದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.