Asianet Suvarna News Asianet Suvarna News

ಹಳೆ ನೋಟು ವಿನಿಮಯಕ್ಕಾಗಿ ಮಹಿಳೆಯಿಂದ ವಿವಸ್ತ್ರಳಾಗಿ ಪ್ರತಿಭಟನೆ

ಡಿ.30ರ ಬಳಿಕವೂ ರಿಸರ್ವ್ ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿರುವ ಹಿನ್ನಲೆಯಲ್ಲಿ ಮಗುವನ್ನು ಹೊಂದಿದ್ದ ಮಹಿಳೆಯೊಬ್ಬಳು ರಿಸರ್ವ್ ಬ್ಯಾಂಕಿಗೆ ಭೇಟಿ ನೀಡಿದರೂ, ಹೊಸ ನೋಟು ಪಡೆಯಲು ಸಾಧ್ಯವಾಗಲಿಲ್ಲವೆನ್ನಲಾಗಿದೆ.

Woman Goes Topless After Failed to Get her Old Notes Exchanged

ನವದೆಹಲಿ (ಜ.05): ಹಳೆಯ ನೋಟುಗಳನ್ನು ವಿನಿಮಯ ಮಾಡಲು ಸತತವಾಗಿ ಪ್ರಯತ್ನಿಸಿದ ಬಳಿಕವೂ ಸಾಧ್ಯವಾಗದಿದ್ದಾಗ ಬಡ ಮಹಿಳೆಯೊಬ್ಬಳು ವಿವಸ್ತ್ರಳಾಗಿ ಪ್ರತಿಭಟಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಡಿ.30ರ ಬಳಿಕವೂ ರಿಸರ್ವ್ ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿರುವ ಹಿನ್ನಲೆಯಲ್ಲಿ ಮಗುವನ್ನು ಹೊಂದಿದ್ದ ಮಹಿಳೆಯೊಬ್ಬಳು ರಿಸರ್ವ್ ಬ್ಯಾಂಕಿಗೆ ಭೇಟಿ ನೀಡಿದರೂ, ಹೊಸ ನೋಟು ಪಡೆಯಲು ಸಾಧ್ಯವಾಗಲಿಲ್ಲವೆನ್ನಲಾಗಿದೆ.

ಹತಾಶಳಾದ ಮಹಿಳೆ ಕೊನೆಗೆ ಪ್ರತಿಭಟನೆಯ ರೂಪದಲ್ಲಿ ತನ್ನ ಮೇಲ್ವಸ್ತ್ರವನ್ನು ಕಳಚಿ ರಿಸರ್ವ್ ಬ್ಯಾಂಕ್ ಗೇಟಿನ ಮುಂದೆ ಕುಳಿತುಕೊಂಡಳು ಎನ್ನಲಾಗಿದೆ.

ಮಹಿಳೆಯ ಅನಿರೀಕ್ಷಿತವಾದ ಪ್ರತಿಭಟನೆಯಿಂದ ತಬ್ಬಿಬ್ಬಾದ  ಭದ್ರತಾ ಸಿಬ್ಬಂದಿ ಪೊಲೀಸರಿಗೆ  ಕರೆದ ಬಳಿಕ ಆಕೆಯನ್ನು ಠಾಣೆಗೆ ಕರೆದೊಯ್ಯಲಾಯಿತು.

ಹಳೆಯ ನೋಟುಗಳನ್ನು ರಿಸರ್ವ್ ಬ್ಯಾಂಕಿನಲ್ಲಿ ಮಾ.31ರವರೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿರುವುದೆಂದು ಪ್ರಧಾನಿ ಮೋದಿ ನ.8ರ ಭಾಷಣದಲ್ಲಿ ಹೇಳಿದ್ದರು.

 

Follow Us:
Download App:
  • android
  • ios