ಹೆರಿಗೆ ನೋವಿನಲ್ಲಿರುವ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಕಾರು, ಜೀಪು, ಆಟೊಗಳಲ್ಲಿ ಮಗುವಿಗೆ ಜನ್ಮ ನೀಡುವುದು ಅಸಮಾನ್ಯವಾದ ಘಟನೆಯೇನಲ್ಲ. ಅದೇ ರೀತಿ, ಮಹಾರಾಷ್ಟ್ರದ ಪುಣೆಯಲ್ಲಿ ಓಲಾ ಕ್ಯಾಬ್‌'ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಹಾರಾಷ್ಟ್ರ(ಅ.07): ಹೆರಿಗೆ ನೋವಿನಲ್ಲಿರುವ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಕಾರು, ಜೀಪು, ಆಟೊಗಳಲ್ಲಿ ಮಗುವಿಗೆ ಜನ್ಮ ನೀಡುವುದು ಅಸಮಾನ್ಯವಾದ ಘಟನೆಯೇನಲ್ಲ. ಅದೇ ರೀತಿ, ಮಹಾರಾಷ್ಟ್ರದ ಪುಣೆಯಲ್ಲಿ ಓಲಾ ಕ್ಯಾಬ್‌'ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶೇಷ ಎಂದರೆ, ಇದರ ಉಡುಗೊರೆಯಾಗಿ ತಾಯಿ ಮತ್ತು ಮಗುವಿಗೆ ಮುಂದಿನ ಐದು ವರ್ಷ ಗಳ ಕಾಲ ಉಚಿತ ಕ್ಯಾಬ್ ಸೇವೆ ನೀಡುವ ಬಗ್ಗೆ ಓಲಾ ಘೋಷಣೆ ಮಾಡಿದೆ. ಮಗುವಿಗೆ ನಾಮಕರಣ ಮಾಡಿದ ಬಳಿಕ ವಿಶೇಷ ಕೂಪನ್ ನೀಡಲಾಗುವುದು ಎಂದು ಓಲಾ ಹೇಳಿದೆ.