ಉತ್ತರಪ್ರದೇಶ ಮಹೋಬಾ ಜಿಲ್ಲೆಯ ಭೂಪನೊಬ್ಬ, ಪತ್ನಿ ಮಾಡಿದ ರೊಟ್ಟಿ ಸುಟ್ಟುಹೋಗಿದೆ ಎಂದು ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಈತನಿಗೆ ಪತ್ನಿ ಮೇಲೆ ಪದೇ ಪದೇ ಭಾರೀ ಸಿಟ್ಟು ಬರುತ್ತಿತ್ತಂತೆ. 3 ದಿನಗಳ ಹಿಂದೆ ಪತ್ನಿ ಮಾಡಿದ್ದ ರೊಟ್ಟಿ ಸುಟ್ಟು ಕಪ್ಪಾಗಿದೆ ಎಂದು ಬೇಸತ್ತು ಆ ಕ್ಷಣದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಈ ಬಗ್ಗೆ ದೂರು ನೀಡಿದ ಬಳಿಕ ವಿಷಯ ಬಹಿರಂಗವಾಗಿದೆ.

ತ್ರಿವಳಿ ತಲಾಖ್ ಅಸಿಂಧು ಎಂಬ ಕಳೆದ ವರ್ಷದ ಕೋರ್ಟ್ ತೀರ್ಪು ಈ ಮಹಾನುಭಾವನಿಗೆ ಗೊತ್ತಿಲ್ಲವೆಂದು ಕಾಣುತ್ತೆ. ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ಅನೇಕ ಕ್ರಮ ತೆಗೆದುಕೊಂಡಿದ್ದು ಅದರಲ್ಲಿ ತಲಾಖ್ ರದ್ದು ಮಾಡಿರುವುದು ಒಂದು.