Asianet Suvarna News Asianet Suvarna News

ಆತ್ಮಹತ್ಯೆ ಮಾಡಲನುವಾದವಳಿಗೆ ದಾರಿಹೋಕನ ಮೇಲಾಯ್ತು ಪ್ರೀತಿ! ಮರುಕ್ಷಣವೇ ಮದುವೆಯಾಗಿ ಹೊಸ ಜೀವನದ ಆರಂಭ

ಆತ್ಮಹತ್ಯೆ ಮಾಡಹೊರಟವರಿಗೆ ಪ್ರೀತಿಯಾಗಿ ಮದುವೆಯಾಗುವುದನ್ನು ನಾವು ಹಲವಾರು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇದೀಗ ಇಂತಹ ನೈಜ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

woman gets marriage while going to commit suicide
  • Facebook
  • Twitter
  • Whatsapp

ಬಿಹಾರ(ಮೇ.24): ಆತ್ಮಹತ್ಯೆ ಮಾಡಹೊರಟವರಿಗೆ ಪ್ರೀತಿಯಾಗಿ ಮದುವೆಯಾಗುವುದನ್ನು ನಾವು ಹಲವಾರು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇದೀಗ ಇಂತಹ ನೈಜ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಇಲ್ಲಿನ ನವಾದ ಜಿಲ್ಲೆಯ ಶಾಹಪುರದ ನಿವಾಸಿ ಪಿಂಕಿ ಎಂಬಾಕೆ ತನ್ನ ಗಂಡನ ಮನೆಯವರು ನೀಡುತ್ತಿದ್ದ ಹಿಂಸೆಯಿಂದ ಬಹಳ ನೊಂದಿದ್ದಳು. ಪಿಂಕಿ ಹೇಳುವ ಅನ್ವಯ ಗಂಡನ ಮನೆಯವರು ಈಕೆಗೆ ಪ್ರತಿದಿನ ಹೊಡೆಯುತ್ತಿದ್ದರಂತೆ ಅಲ್ಲದೇ ಈಕೆಯನ್ನು ಹುಚ್ಚಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದರಂತೆ. ಇದರಿಂದ ಬಹಳ ನೊಂದಿದ್ದ ಆಕೆ ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.

ಆದರೆ ಮಾಧ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ ಹೀಗೆ ಮಾಡಹೊರಟವಳಿಗೆ ದಾರಿಮಧ್ಯೆ ಬಿಹಾರದ ಅಕಿಲೇಷ್ ಮಾಂಜಿ ಎಂಬಾತನ ಪರಿಚಯವಾಗಿದೆ. ಪಿಂಕಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಆಕೆಯ ಮಾತುಗಳಿಂದ ಆತ್ಮಹತ್ಯೆ ಮಾಡಲು ಹೊರಟಿದ್ದಾಳೆ ಎಂಬ ವಿಚಾರ ಅಕಿಲೇಷ್'ಗೆ ತಿಳಿದಿದೆಯಂತೆ. ಬಳಿಕ ಅಕಿಲೇಷ್ ಆಕೆಗೆ ಬಹಳಷ್ಟು ಅರ್ಥೈಸಿದ್ದಲ್ಲದೆ, ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಆದರೆ ಇತ್ತ ಪಿಂಕಿಯ ಗಂಡನ ಮನೆಯವರು ಹಾಗೂ ತವರು ಮನೆಯವರು ಆಕೆ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.

ಕಆದರೆ ಕೆಲ ದಿನಗಳ ಬಳಿಕ ಪಿಂಕಿ ಬಾಕಡ್'ಜೋಲಿ ಎಂಬಲ್ಲಿ ವ್ಯಕ್ತಿಯೊಬ್ಬನೊಂದಿಗೆ ವಾಸವಾಗಿದ್ದಾಳೆ ಎಂಬ ವಿಚಾರ ಮನೆಯವರಿಗೆ ತಿಳಿದಿದೆ. ಪಿಂಕಿಯನ್ನು ಮನೆಗೆ ಕರೆತರಲು ಕುಟುಂಬಸ್ಥರು ಹೋಗಿದ್ದು, ಈ ವೇಳೆ ಆಕೆ ಅಕಿಲೇಷ್'ನೊಂದಿಗೆ ಮದುವೆಯಾಗಿದ್ದಾಳೆ, ಅಲ್ಲದೇ ಆಕೆಯನ್ನು ಅಕಿಲೇಷ್'ನ ಮನೆಯವರು ಸೊಸೆಯಾಗಿ ಸ್ವೀಕರಿಸಿದ್ದಾರೆ ಎಂಬ ವಿಚಾರ ತಿಳಿಯುತ್ತದೆ.

ತಮನ್ಮಿಬ್ಬರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದೆಂದು ಅಕಿಲೇಷ್ ಪಿಂಕಿಯನ್ನು ತನ್ನ ಮನೆಗೆ ಕರೆದೊಯ್ದ ಮರುದಿನವೇ ಹತ್ತಿರದ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂಬುವುದಾಗಿ ಊರಿನ ಜನರಿಂದ ತಿಳಿದು ಬಂದಿದೆ.

ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದಾರೆ. ಹೀಗಾಗಿ ಕೆಲವರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮದುವೆಗೆ ವಿರೋಧಿಸುವ ಪ್ರಯತ್ನವನ್ನೂ ಮಾಡಿದ್ದರೆಂಬ ವಿಚಾರ ತಿಳಿದು ಬಂದಿದೆ. ಆದರೆ ಅಕಿಲೇಷ್ ಮನೆಯವರು ಇದ್ಯಾವುದನ್ನೂ ಗಂಣನೆಗೆ ತೆಗೆದುಕೊಂಡಿಲ್ಲ. ಇನ್ನು ಕೆಲವರು 'ಪಿಂಕಿ ತನ್ನ ಜೀವನ ಮುಮದುವರೆಸುವ ಯೋಚನೆ ಮಾಡಿ ಒಳ್ಳೆ ನಿರ್ಧಾರವನ್ನೇ ಮಾಡಿದ್ದಾಳೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Follow Us:
Download App:
  • android
  • ios