ಅಮೇರಿಕಾ ವಿಮಾನಯಾನದ ಅಚಾತುರ್ಯದಿಂದ ಫ್ರಾನ್ಸ್ ಮಹಿಳೆಯೊಬ್ಬಳು ಅಮೇರಿಕಾದಲ್ಲಿ 4800 ಕಿಮೀ ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿರುವ ಘಟನೆ ನಡೆದಿದೆ. ಅಮೇರಿಕಾ ವಿಮಾನಯಾನವು ಕೊನೆ ಕ್ಷಣದಲ್ಲಿ ಗೇಟ್ ಚೇಂಜ್ ಮಾಡಿದ್ದರಿಂದ ಆಕೆಯನ್ನು,ಆಕೆ ತೆರಳಬೇಕಾಗಿದ್ದ ವಿಮಾನವನ್ನು ಗುರುತಿಸುವಲ್ಲಿ ವಿಫಲವಾಗಿದ್ದೇ ಈ ಯಡವಟ್ಟಿಗೆ ಕಾರಣವಾಗಿದೆ.
ನ್ಯೂಯಾರ್ಕ್ (ಮೇ.07): ಅಮೇರಿಕಾ ವಿಮಾನಯಾನದ ಅಚಾತುರ್ಯದಿಂದ ಫ್ರಾನ್ಸ್ ಮಹಿಳೆಯೊಬ್ಬಳು ಅಮೇರಿಕಾದಲ್ಲಿ 4800 ಕಿಮೀ ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿರುವ ಘಟನೆ ನಡೆದಿದೆ. ಅಮೇರಿಕಾ ವಿಮಾನಯಾನವು ಕೊನೆ ಕ್ಷಣದಲ್ಲಿ ಗೇಟ್ ಚೇಂಜ್ ಮಾಡಿದ್ದರಿಂದ ಆಕೆಯನ್ನು,ಆಕೆ ತೆರಳಬೇಕಾಗಿದ್ದ ವಿಮಾನವನ್ನು ಗುರುತಿಸುವಲ್ಲಿ ವಿಫಲವಾಗಿದ್ದೇ ಈ ಯಡವಟ್ಟಿಗೆ ಕಾರಣವಾಗಿದೆ.
ಲೂಸಿ ಬಹೇತೋಕಿಲೈ ಎನ್ನುವ ಮಹಿಳೆ ಈ ರೀತಿ 4800 ಕಿಮೀ ಪ್ರಯಾಣಿಸಿದ್ದಾರೆ.ಇವರಿಗೆ ಇಂಗ್ಲೀಷ್ ಮಾತನಾಡಲು ಬಾರದಿದ್ದು, ನೇವಾರ್ಕ್ನಿಂದ ಪ್ಯಾರೀಸ್'ಗೆ ಏ.24 ರಂದು ತೆರಳಬೇಕಾಗಿತ್ತು. ಆದರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಿಮಾನದಿಂದ ಕೆಳಗಿಳಿದಾಗ ಅವರಿಗೆ ಶಾಕ್ ಕಾದಿತ್ತು.ತಾವು ಹೋಗಬೇಕಾಗಿದ್ದ ಸ್ಥಳ ಇದಲ್ಲ ಎಂದು ಗೊತ್ತಾಯಿತು. ಹಿಂತಿರುಗಿ ಪ್ಯಾರೀಸ್'ಗೆ ಹೋಗಲು 11 ತಾಸು ಕಾಯಬೇಕಾಯಿತು.ಒಟ್ಟಾರೆ ಲೂಸಿ 28 ತಾಸು ಪ್ರಯಾಣಿಸಬೇಕಾಯಿತು ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.
ಲೂಸಿ ಬೋರ್ಡಿಂಗ್ ಪಾಸ್ ನಲ್ಲಿ 'ನೇವಾರ್ಕ್ ಟು ಚಾರ್ಲೆಸ್ ಡೆ ಗುಲ್ಲೆ' ಎಂದಿರುವುದನ್ನು ನೋಡಿ ಆ ಗೇಟಿನ ಬಳಿ ಹೋಗಿ ಅಮೇರಿಕಾ ಪ್ರತಿನಿಧಿಗೆ ಸ್ಕಾನ್ ಮಾಡಲು ಹೇಳಿದರು. ನಂತರ ಅಮೇರಿಕಾಗೆ ತೆರಳುವ ವಿಮಾನವನ್ನು ಹತ್ತಿದರು. ಅವರ ಆಸನದಲ್ಲಿ ಅದಾಗಲೇ ಒಬ್ಬರು ಕುಳಿತಿದ್ದು, ವಿಮಾನ ಸಿಬ್ಬಂದಿಗೆ ತಮ್ಮ ಪಾಸನ್ನು ಇನ್ನೊಮ್ಮೆ ನೋಡುವಂತೆ ಕೇಳಿಕೊಂಡರು. ಆಗಲೂ ಅವರು ಹತ್ತಿರುವುದು ಬೇರೆ ವಿಮಾನ ಎಂದು ಆಕೆಯ ಗಮನಕ್ಕೆ ಬಂದಿರಲಿಲ್ಲ. ಆಗ ವಿಮಾನ ಸಿಬ್ಬಂದಿ ಅವರನ್ನು ಬೇರೆಡೆಗೆ ಕೂರಿಸಿದರು. ಕೊನೆಕ್ಷಣದಲ್ಲಿ ಗೇಟ್ ಬದಲಾವಣೆ ಮಾಡಿರುವುದಾಗಿ ಏರ್'ಲೈನ್ಸ್'ನವರು ಫ್ರೆಂಚ್'ನಲ್ಲಿ ಘೋಷಣೆ ಮಾಡಿಲ್ಲವೆಂದು ಲೂಸಿ ಹೇಳಿದ್ದಾರೆ.
