ಹೆರಿಗೆಗೆ 45 ನಿಮಿಷ ಮೊದಲು ಆಕೆ ಗರ್ಭಿಣಿ ಎಂದು ಪತ್ತೆ..!

First Published 13, Jan 2018, 9:11 AM IST
Woman Finds Out She is Pregnant Only 45 Minutes Before Giving Birth to Her Child
Highlights

ಹೆಣ್ಣಿಗೆ ಗರ್ಭ ಧರಿಸುವುದೆಂದರೆ ಸಂಭ್ರಮ. 9 ತಿಂಗಳ ಕಾಲದ ವಿಶೇಷ ಅನುಭವ. ಆದರೆ ಬ್ರಿಟನ್‌ನ ಲೀಸಾಗೆ ಮಾತ್ರ ಅದೊಂದು ಶಾಕ್. ಏಕೆಂದರೆ ಆಕೆಗೆ ತಾನು ಗರ್ಭ ಧರಿಸಿದ್ದು ಗೊತ್ತಾಗಿದ್ದು, ಹೆರಿಗೆಗೆ ಕೇವಲ 45 ನಿಮಿಷ ಮುನ್ನ!

ಲಂಡನ್ : ಹೆಣ್ಣಿಗೆ ಗರ್ಭ ಧರಿಸುವುದೆಂದರೆ ಸಂಭ್ರಮ. 9 ತಿಂಗಳ ಕಾಲದ ವಿಶೇಷ ಅನುಭವ. ಆದರೆ ಬ್ರಿಟನ್‌ನ ಲೀಸಾಗೆ ಮಾತ್ರ ಅದೊಂದು ಶಾಕ್. ಏಕೆಂದರೆ ಆಕೆಗೆ ತಾನು ಗರ್ಭ ಧರಿಸಿದ್ದು ಗೊತ್ತಾಗಿದ್ದು, ಹೆರಿಗೆಗೆ ಕೇವಲ 45 ನಿಮಿಷ ಮುನ್ನ! ನಂಬಿ.

ಒಂದು ರಾತ್ರಿ ಇದ್ದಕ್ಕಿದ್ದಂತೆ ಲೀಸಾಗೆ ತೀರಾ ಆಯಾಸವಾಗತೊಡಗಿತು. ಪತಿ ನಿಕ್, ಆ್ಯಂಬುಲೆನ್ಸ್ ಬರಹೇಳಿದರು. ಆಸ್ಪತ್ರೆಯಲ್ಲಿ ಲೀಸಾಗೆ ಪರೀಕ್ಷೆ ನಡೆಸಲಾಯಿತು. ಈ ವೇಳೆ ವೈದ್ಯರು, ಇನ್ನೇನು ಕೆಲವೇ ಹೊತ್ತಿನಲ್ಲಿ ಹೆರಿಗೆ ಆಗಬಹುದು ಎಂದರು. ಇದನ್ನು ಕೇಳಿ ಪತಿ, ಪತ್ನಿಗೆ ಫುಲ್ ಶಾಕ್.

ಹೀಗೆ ಹೇಳಿದ 45 ನಿಮಿಷಗಳಲ್ಲೇ ಲೀಸಾ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದರು. ಆ ದಂಪತಿಗೀಗ ಮತ್ತೊಂದು ಮಗು ಹುಟ್ಟಿದೆ. ಈ ವೇಳೆ ಅವರು ಹಳೆಯ ವಿಷಯ ನೆನಪಿಸಿಕೊಂಡಿದ್ದಾರೆ. 

loader