Asianet Suvarna News Asianet Suvarna News

ವಿವಾಹವಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ

ಮ್ಯಾಟ್ರಿಮೊನಿ ಡಾಟ್ ಕಾಮ್‌ನಲ್ಲಿ ವಿಧವೆಯೊಬ್ಬರನ್ನು ಮದುವೆಯಾವುದಾಗಿ ನಂಬಿಸಿ ಸೈನ್ಯದಲ್ಲಿ ವೈದ್ಯನಾಗಿರುವ ವ್ಯಕ್ತಿಯೊಬ್ಬ ₹10 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಂಚನೆಗೊಳಗಾದ ಮಹಿಳೆ ಜೀವನ್‌ಬೀಮಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮ್ಯಾಟ್ರಿಮನಿ ಡಾಟ್‌ಕಾಮ್‌ನಲ್ಲಿ ತಾನು ಕಲಬುರಗಿ ಮೂಲದವನು ಎಂದು ಸೇನೆಯಲ್ಲಿ ವೈದ್ಯನಾಗಿದ್ದು, ಜೋರ್ಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಕ್ರಮೇಣ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.

Woman Duped By a Man Posed As Army Doctor

ಬೆಂಗಳೂರು: ಮ್ಯಾಟ್ರಿಮೊನಿ ಡಾಟ್ ಕಾಮ್‌ನಲ್ಲಿ ವಿಧವೆಯೊಬ್ಬರನ್ನು ಮದುವೆಯಾವುದಾಗಿ ನಂಬಿಸಿ ಸೈನ್ಯದಲ್ಲಿ ವೈದ್ಯನಾಗಿರುವ ವ್ಯಕ್ತಿಯೊಬ್ಬ ₹10 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ವಂಚನೆಗೊಳಗಾದ ಮಹಿಳೆ ಜೀವನ್‌ಬೀಮಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮ್ಯಾಟ್ರಿಮನಿ ಡಾಟ್‌ಕಾಮ್‌ನಲ್ಲಿ ತಾನು ಕಲಬುರಗಿ ಮೂಲದವನು ಎಂದು ಸೇನೆಯಲ್ಲಿ ವೈದ್ಯನಾಗಿದ್ದು, ಜೋರ್ಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಕ್ರಮೇಣ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು.

ಕ್ರಮೇಣ ತಮ್ಮನ್ನು ಮದುವೆಯಾಗುವುದಾಗಿ ಡಾ.ಸಚಿ ನಂಬಿಸಿದ್ದ. ಹೀಗೆ ಇಬ್ಬರು ನಿತ್ಯ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ತನಗೆ ಈಗಾಗಲೇ ಒಂದು ಮದುವೆ ಆಗಿದ್ದು ಪತ್ನಿ ತೀರಿಕೊಂಡಿದ್ದಾರೆ. ಒಬ್ಬ ಮಗ ಇದ್ದಾನೆ. ಕಲಬುರಗಿಯಲ್ಲಿ ತಂದೆ ತಾಯಿಯೇ ಆತನನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಡಾ.ಸಚಿ ಹೇಳಿದ್ದರು. ಬಳಿಕ ಇಬ್ಬರು ವಿವಾಹವಾಗಲು ಒಪ್ಪಿದ್ದರು.

ಇತ್ತೀಚೆಗೆ ಕರೆ ಮಾಡಿದ್ದ ಸಚಿ ತನಗೆ ಬೆಂಗಳೂರಿನ ಏರ್‌ಫೋರ್ಸ್ ಕಮಾಂಡೋ ಆಸ್ಪತ್ರೆಗೆ ವರ್ಗಾವಣೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಡಾ. ಸಚಿ ಮಹಿಳೆಗೆ ಕರೆ ಮಾಡಿದ್ದ. ಇದರಿಂದ ಮಹಿಳೆ ಸಂತೋಷ ಪಟ್ಟು ಮದುವೆಯಾಗುವ ದಿನ ಹತ್ತಿರ ಬಂದಿದೆ ಎಂದು ಸಂತಸಪಟ್ಟಿದ್ದರು. ಬೆಂಗಳೂರಿಗೆ ವಾಪಸ್ ಬರುವ ವೇಳೆ ಸುಂಕದ ಅಧಿಕಾರಿಗಳು ತನ್ನನ್ನು ವಶಕ್ಕೆ ಪಡೆದಿದ್ದಾರೆ. ಸಮಸ್ಯೆ ಬಗೆಹರಿಸಿಕೊಳ್ಳಲು 10 ಲಕ್ಷದ ಹಣದ ಅಗತ್ಯವಿದೆ ಎಂದು ಹೇಳಿದ್ದ. ಇದನ್ನು ನಂಬಿದ ಮಹಿಳೆ ಆರೋಪಿ ಕೇಳಿದ ಬೇರೆ-ಬೇರೆ ಖಾತೆಗಳಿಗೆ ಸುಮಾರು ₹9 ಲಕ್ಷ ಹಣವನ್ನು ಖಾತೆಗೆ ವರ್ಗಾವಣೆ ಮಾಡಿದ್ದರು.

ಹಣ ತಮ್ಮ ಖಾತೆಗೆ ಬೀಳುತ್ತಿದ್ದಂತೆ ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ, ಮ್ಯಾಟ್ರಿಮನಿ ಡಾಟ್ ಕಾಮ್’ನಲ್ಲಿ ತಮ್ಮ ಖಾತೆಯನ್ನು ರದ್ದುಗೊಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

Follow Us:
Download App:
  • android
  • ios