ಮೊಡವೆಗೂ, ಕ್ಯಾನ್ಸರ್ ಗೂ ನಾಯಿ ಮೂತ್ರ ಮದ್ದಂತೆ..!

First Published 22, Jun 2018, 6:50 PM IST
WOMAN DRINKS DOG URINE, SAYS IT PREVENTS ACNE AND CANCER
Highlights

ಈಕೆಯ ಸೌಂದರ್ಯದ ಗುಟ್ಟು ನಾಯಿ ಮೂತ್ರವಂತೆ

ನಿತ್ಯವೂ ಸಾಕು ನಾಯಿಯ ಮೂತ್ರ ಕುಡಿಯುವ ಲಿನ್

ಕ್ಯಾನ್ಸರ್ ಗೂ ರಾಮಬಾಣವಂತೆ ನಾಯಿ ಮೂತ್ರ

ಲಿನ್ ವಿಡಿಯೋಗೆ ಕ್ಯಾಕರಿಸಿ ಉಗಿದ ನೆಟಿಜನ್ಸ್  

ವಾಷಿಂಗ್ಟನ್(ಜೂ.22): ನಾಯಿ ಮನುಷ್ಯನ ಅತ್ಯಂತ ನಂಬಿಗಸ್ತ ಪ್ರಾಣಿ ಅಂತಾರೆ. ಆದರೆ ಈ ಮಹಿಳೆ ನಾಯಿಯ ಮೂತ್ರವೇ ತನ್ನ ಆರೋಗ್ಯದ ಗುಟ್ಟು ಅಂತಾ ಹೇಳಿದರೆ ನೀವು ನಂಬಲೇಬೇಕು.

ಹೌದು, ಲಿನ್ ಲ್ಯೂ ಎಂಬ 21 ವರ್ಷದ ಯುವತಿ ನಿತ್ಯವೂ ತನ್ನ ಸಾಕು ಪ್ರಾಣಿಯ ಮೂತ್ರ ಕುಡಿಯುತ್ತಾಳಂತೆ. ಯಾಕಮ್ಮಾ ಹೀಗೆ ಮಾಡ್ತಿಯಾ ಅಂದ್ರೆ ನಾಯಿಯ ಮೂತ್ರ ಕುಡಿಯುವುದರಿಂದ ಮುಖದ ಮೇಲಿನ ಮೊಡವೆ ಮಾಯವಾಗುತ್ತವೆ ಅಂತಾಳೆ. ಅಷ್ಟೇ ಅಲ್ಲ ನಾಯಿಯ ಮೂತ್ರ ಕ್ಯಾನ್ಸರ್ ಗೂ ರಾಮಬಾಣವಂತೆ.

ಇದಕ್ಕೆ ಕಾರಣವನ್ನೂ ನೀಡಿರುವ ಲಿನ್, 1962 ರಲ್ಲಿ ಹಾವರ್ಡ್ ವಿವಿ ಸಂಶೋಧನಾ ಗ್ರಂಥದಲ್ಲಿ ಈ ಕರಿತು ಪ್ರಕಟಿಸಲಾಗಿತ್ತು ಎಂದು ಸಮಜಾಯಿಷಿ ನೀಡುತ್ತಾಳೆ. ಲಿನ್ ತನ್ನ ಮುದ್ದಿನ ನಾಯಿಯ ಮೂತ್ರ ಸಂಗ್ರಹಣೆ ಮಾಡಿ ಅದನ್ನು ಕುಡಿಯುತ್ತಾಳೆ. ಒಂದು ವೇಳೆ ತನ್ನ ಸಾಕು ನಾಯಿ ಕಡಿಮೆ ಮೂತ್ರ  ಮಾಡಿದರೆ ಪಕ್ಕದ ಮನೆಯ ನಾಯಿಯ ಮೂತ್ರ ಸಂಗ್ರಹಿಸುತ್ತಾಳಂತೆ.

ಇನ್ನು ಲಿನ್ ತನ್ನ ನಾಯಿಯ ಮೂತ್ರ ಕುಡಿಯುತ್ತಿರುವ ವಿಡಿಯೋ ಕೂಡ ಮಾಡಿದ್ದು, ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಲಿನ್ ಳನ್ನು ತರಾಟೆಗೆ ತೆಗೆದುಕೊಂಡಿರುವ ಕೆಲವರು, ನಿನಗೆ ಬುದ್ದಿ ನೆಟ್ಟಗಿಲ್ಲ ಎಂದು ಹರಿಹಾಯ್ದಿದ್ದಾರೆ.
 

loader