ಫುಟ್ ಬೋರ್ಡಿನಲ್ಲಿ ನಿಂತು ಮಹಿಳೆಯ ದುಸ್ಸಾಹಸ! ಎಲ್ಲಾ ಮಾಡಿ ರೈಲು ನಿಲ್ಲುವ ಮುಂಚೆಯೇ ಕೆಳಗೆ ಜಿಗಿದಳು!

ಮುಂಬೈ: ಚಲಿಸುತ್ತಿರುವ ರೈಲಿನಲ್ಲಿ ಯುವಕರು ಸ್ಟಂಟ್ ಮಾಡುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮಹಿಳೆಯೊಬ್ಬಳು ಇದೇ ರೀತಿ ಸ್ಟಂಟ್ ಮಾಡೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈಯ ರೇ ರೋಡ್ ಸ್ಟೇಷನ್‌ನಿಂದ ಕಾಟನ್ ಗ್ರೀನ್ ಸ್ಟೇಷನ್ ನಡುವೆ ಈ ಮಹಿಳೆ ಫುಟ್ ಬೋರ್ಡಿನಲ್ಲಿ ನಿಂತು ಹಳಿ ಬದಿಯ ಕಂಬಗಳನ್ನು ಸ್ಪರ್ಶಿಸುವ ಸಾಹಸ ಮಾಡಿದ್ದಾಳೆ. ಅದು ಕೂಡಾ ರಾತ್ರಿ ಸಮಯದಲ್ಲಿ!

ಕೊನೆಗೆ ರೈಲು ಕಾಟನ್ ಗ್ರೀನ್ ನಿಲ್ದಾಣದಲ್ಲಿ ನಿಲ್ಲುವ ಮುಂಚೆಯೇ ಆಕೆ ಕೆಳಗೆ ಜಿಗಿದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

Scroll to load tweet…

ಈ ಘಟನೆ ಶುಕ್ರವಾರ ನಡೆದಿದ್ದು, ರೈಲ್ವೇ ಪೊಲೀಸರು ಆ ಖತರ್ನಾಕ್ ಮಹಿಳೆಯ ಗುರುತನ್ನು ಇನ್ನೂ ಖಚಿತಪಡಿಸಿಲ್ಲ.

ಆಕೆ ಯಾರೆಂಬುವುದನ್ನು ಪತ್ತೆಹಚ್ಚಲು ನಾವು ರೇ ರೋಡ್ ಮತ್ತು ಕಾಟನ್ ಗ್ರೀನ್ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ, ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.