ಚೆನ್ನೈ[ಜು.27] ತಮಿಳುನಾಡಿನ ಸೂಪರ್ ಮಾರ್ಕೆಟ್ ವೊಂದಕ್ಕೆ ತೆರಳಿದ 34 ವರ್ಷದ ನಂದಿನಿ ಎಂಬ ಪೊಲೀಸ್ ಪೇದೆ ಚಾಕಲೇಟ್ ಕದ್ದು ಸಿಕ್ಕಿಹಾಕೊಂಡು ಬಿದ್ದಿದ್ದಾರೆ. ಮಹಿಳಾ ಪೇದೆಯ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೂಪರ್ ಮಾರುಕಟ್ಟೆಯ ನೌಕರರು ರೆಡ್ ಹ್ಯಾಂಡ್ ಆಗಿ ಹಿಡಿದು ಹಾಕಿದ್ದಾರೆ.

ಇದಾದ ಮೇಲೆ  ಮಹಿಳಾ ಪೇದೆ ತನ್ನ ಮೇಲೆ ದೂರು ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹಾಗಾದರೆ ಲಿಖಿತವಾಗಿ ಒಂದು ಕ್ಷಮಾಪಣೆ ಪತ್ರ ಬರೆದುಕೊಡಿ ಎಂದಾಗ ತಾನು ಕದ್ದಿದ್ದ 113 ರು. ಚಾಕಲೇಟ್ ಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ.

 ಆದರೆ ಪ್ರಕರಣ ಇಲ್ಲಿಗೆ ಮುಗಿಯುವುದಿಲ್ಲ. ಚಾಕಲೇಟ್ ಕಳ್ಳಿ ಮನೆಗೆ ಬಂದ ಒಂದು ಗಂಟೆಯ ನಂತರ ಮಹಿಳಾ ಪೇದೆಯ ಗಂಡ ಮತ್ತು ಮೂವರು ಆಸಾಮಿಗಳು ಸೂಪರ್ ಮಾರುಕಟ್ಟೆಗೆ ದಾಳಿ ಮಾಡಿದ್ದಾರೆ. ಸೂಪರ್ ಮಾರುಕಟ್ಟೆ ಮ್ಯಾನೇಜರ್ ಪ್ರಣವ್ ಮೇಲೆ ಹಲ್ಲೆ ಮಾಡಿದ್ದಾರೆ. ಸಿಸಿಟಿವಿಲ್ಲಿ ಎಲ್ಲ ದೃಶ್ಯಗಳು ರೆಕಾರ್ಡ್ ಆಗಿದ್ದು ಇಲ್ಲಿಯವರೆಗೆ ಯಾವ ದೂರು ದಾಖಲಾಗಿಲ್ಲ.