ಮೇಲಿನಾ ತನ್ನ  ಡೆತ್‌ನೋಟ್’ನಲ್ಲಿ  ಮಮತಾ, ಲಿಲ್ಲಿ, ಪಪ್ಪಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರ ಹೆಸರನ್ನು ಬರೆದಿದ್ದಳು. ಈ ಹಿನ್ನೆಲೆಯಲ್ಲಿ ಈ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ರೋಷನ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೈಸೂರು (ಫೆ,28): ಎರಡನೇ ಮದುವೆಗೆ ಪೋಷಕರು ಒಪ್ಪದ ಕಾರಣ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಲ್ಲಿ ನಡೆದಿದೆ.

ಮೆಲಿನಾ ಎಂಬಾಕೆಯೇ ನೇಣಿಗೆ ಶರಣಾದ ಮಹಿಳೆ. ಮೇಲೀನಾಗೆ ಈ ಮೊದಲೇ ವಿವಾಹವಾಗಿದ್ದು, ಪತಿಯನ್ನು ಕಳೆದುಕೊಂಡಿದ್ದಳು. ಆದರೆ ಕೆಲ ದಿನಗಳ ಬಳಿಕ ಎನ್.ಆರ್.ಮೋಹಲ್ಲಾದ ರೋಷನ್ ಎಂಬಾತನ‌ ಮೇಲೆ ಪ್ರೀತಿ ಉಂಟಾಗಿ ಆತನನ್ನು ಮದುವೆ ಮಾಡಿಕೊಡುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಳು.

ಆದರೆ ಮೇಲಿನಾಗಿಂತಲೂ ಯುವಕ ರೋಷನ್​​ 5ವರ್ಷ ಕಡಿಮೆ ವಯಸ್ಸಿನವನಾಗಿದ್ದರಿಂದ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಮೇಲಿನಾ ಇಂದು ನಾಯ್ಡು ನಗರದಲ್ಲಿನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ.

ಮೇಲಿನಾ ತನ್ನ ಡೆತ್‌ನೋಟ್’ನಲ್ಲಿ ಮಮತಾ, ಲಿಲ್ಲಿ, ಪಪ್ಪಿ, ಮಲ್ಲಿಕಾ ಮತ್ತು ಇರ್ದುರಾಜ್ ಎಂಬವರ ಹೆಸರನ್ನು ಬರೆದಿದ್ದಳು. ಈ ಹಿನ್ನೆಲೆಯಲ್ಲಿ ಈ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮ ರೋಷನ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಘಟನೆ ಸಂಬಂಧ ಮೆಲೀನಾ ತಾಯಿ ಮೇರಿ ಎನ್.ಆರ್. ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.