ಕುಡಿದ ಮತ್ತಿನಲ್ಲಿ ಸ್ನೇಹಿತೆಯ ಮೂಗನ್ನೆ ಕಚ್ಚಿ ತಿಂದಳು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 7:48 PM IST
Woman bites off friend’s nose, swallows it during heated argument USA
Highlights

ಆಕೆ ಸ್ನೇಹಿತೆಯೊಂದಿಗೆ ವಾದ ಮಾಡುತ್ತಿದ್ದಳು. ವಾದ ವಿವಾದಕ್ಕೆ ತಿರುಗಿ ಮಿತಿ ಮೀರಿದಾಗ ಸಿಟ್ಟಿನಲ್ಲಿ ಸ್ನೇಹಿತೆಯ ಮೂಗನ್ನೆ ಕಚ್ಚಿದಳು. ಅಮೆರಿಕದ ಟೆಕ್ಸಾಸ್ ನಲ್ಲಿ ಈ ವಿಚಿತ್ರ ಘಟನೆಯ ವಿವರ ಇಲ್ಲಿದೆ.

ಟೆಕ್ಸಾಸ್[ಜು.19] ಸ್ನೇಹಿತೆಯರಿಬ್ಬರು ಬಾರ್‌ಗೆ ತೆರಳಿ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದು ತೂರಾಡುತ್ತಲೇ ಮನೆಗೆ ಬಂದಿದ್ದಾರೆ, ಈ ವೇಳೆ ಇನ್ನು ಹೆಚ್ಚಿಗೆ ಮದ್ಯ ಬೇಕು ಎಂದು ಗಲಾಟೆ ಶುರುವಾಗಿದೆ.  ಜೆಸ್ಸಿಕಾ ಕೋಲಿನ್ಸ್  ಮತ್ತು ತಟಿಯಾನಾ ಜತೆಯಾಗಿ ಬಾರ್ ಗೆ ತರಳಿದ್ದ ಸ್ನೇಹಿತೆಯರು.

ಕುಡಿದು ತಟಿಯಾನ ಮನೆಗೆ ಬಂದ ನಂತರ ಜೆಸ್ಸಿಕಾ ಕೋಲಿನ್ಸ್ ಮದ್ಯ ಮತ್ತು ಸಿಗರೇಟ್ ಗೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೆ ಒಪ್ಪದ ತಟಿಯಾನಾ ಸುಮ್ಮನಿರುವಂತೆ ಹೇಳಿದ್ದಾಳೆ. ಆದರೆ ಇದರಿಂದ ಕೋಪಗೊಂಡ ಜೆಸ್ಸಿಕಾ ಸ್ನೇಹಿತೆಯ ಮೂಗನ್ನು ಕಚ್ಚಿ ತುಂಡರಿಸಿದ್ದಾಳೆ.

41 ವರ್ಷದ ಜೆಸ್ಸಿಕಾ ರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ 28 ವರ್ಷದ ತಟಿಯಾನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕಾಗಿದೆ. ಮದ್ಯದ ಅಮಲಿನಲ್ಲಿ ಸ್ನೇಹಿತೆಯ ಮೇಲೆ ಹತ್ತಿ ಕುಳಿತ ಜೆಸ್ಸಿಕಾ ಆಕೆಯ ಮಗ್ಗಲು ಬದಲಾಯಿಸಲು ಅವಕಾಶ ನೀಡದೆ ಮೂಗನ್ನು ಕಚ್ಚಿ ತುಂಡರಿಸಿದ್ದಾರೆ.

ಈ ಸುದ್ದಿಯನ್ನು ಇಂಗ್ಲಿಷ್ ನಲ್ಲಿ ಓದಿ

loader