ಲಕ್ಷಾಧಿಪತಿ ಭಿಕ್ಷುಕ ಆಯ್ತು, ಈಗ ಕೋಟ್ಯಾಧಿಪತಿ ಭಿಕ್ಷುಕಿ ಸರದಿ!
ಲಕ್ಷಾಧಿಪತಿ ಭಿಕ್ಷುಕನ ಬೆನ್ನಲ್ಲೇ, ಕೋಟ್ಯಾಧಿಪತಿ ಭಿಕ್ಷುಕಿ ಪತ್ತೆ| ತನ್ನ ಕಔಂಟ್‌ನಲ್ಲಿರುವ ಬ್ಯಾಲೆನ್ಸ್ ಎಷ್ಟು ಇದೆ ಎಂದೂ ಈಕೆಗೆ ಮಾಹಿತಿ ಇರಲಿಲ್ವಂತೆ| ಬ್ಯಾಂಕ್ ಬ್ಯಾಲೆನ್ಸ್ ನೋಡಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್!
ಲೆಬನನ್[ಅ.08]: ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭಿಕ್ಷೆ ಬೇಡುವುದು ಅಪರಾಧ ಹೀಗಿದ್ದರೂ ಭಿಕ್ಷೆ ಬೇಡುವವರ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ. ಕೆಲವರು ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡಿದರೆ, ಮತ್ತೆ ಕೆಲವರು ಇದನ್ನು ವೃತ್ತಿಯನ್ನಾಗಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮುಂಬೈನ ರೈಲು ಹಳಿ ದಾಟುತ್ತಿದ್ದ ವೇಳೆ ಸಾವನ್ನಪ್ಪಿದ್ದ ಭಿಕ್ಷುಕನ ಮನೆಯಲ್ಲಿ 10 ಲಕ್ಷ ರೂ. ಮೊತ್ತ ಪತ್ತೆಯಾಗಿತ್ತು. ಇದು ಎಲ್ಲರನ್ನೂ ಅಚ್ಚರಿಗೀಡು ಮಾಡಿತ್ತು. ಆದರೀಗ ಈ ಪ್ರಕರಣದ ಬೆನ್ನಲ್ಲೇ ಕೋಟ್ಯಾಧಿಪತಿ ಭಿಕ್ಷುಕಿಯೊಬ್ಬಳು ಸದ್ದು ಮಾಡುತ್ತಿದ್ದಾಳೆ.
ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!
ಹೌದು ಅರಬ್ ದೇಶವಾದ ಲೆಬನನ್ನಲ್ಲಿ ಭಿಕ್ಷುಕಿಯೊಬ್ಬಳ ಖಾತೆಯಲ್ಲಿ ಬರೋಬ್ಬರಿ 5.62 ಕೋಟಿ ರೂ. ಪತ್ತೆಯಾಗಿದೆ. ವಾಫಾ ಮಹಮ್ಮದ್ ಎಂಬಾಕೆಯೇ ಆ ಕೋಟ್ಯಾಧಿಪತಿ ಭಿಕ್ಷುಕಿ. ಪ್ರತಿದಿನ ಭಿಕ್ಷೆ ಬೇಡಿ ಸಂಗ್ರಹಿಸುತ್ತಿದ್ದ ಹಣವನ್ನು ವಾಫಾ ಮಹಮ್ಮದ್ ಇಲ್ಲಿನ ಜಮ್ಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಜಮಾ ಮಾಡುತ್ತಿದ್ದಳು. ಆದರೆ ತನ್ನ ಖಾತೆಯಲ್ಲಿ ಎಷ್ಟು ಮೊತ್ತವಿದೆ ಎಂಬ ವಿಚಾರ ಆಕೆಗೆ ತಿಳಿದಿರಲಿಲ್ಲ.
ಭಿಕ್ಷೆ ಕೇಳಿ ಬಂದವಳು ಚಿನ್ನಾಭರಣ ಎಗರಿಸಿ ಪರಾರಿ!
ಆದರೆ ವಾಫಾ ಮಹಮದ್ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ಗೆ ಚೆಕ್ ಬಂದಾಗ ಆಕೆಯ ಖಾತೆಯಲ್ಲಿ ಸುಮಾರು 6 ಕೋಟಿ ರೂ. ಮೊತ್ತವಿರುವುದನ್ನು ಗಮನಿಸಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಸುಮಾರು 10 ವರ್ಷಗಳಿಂದ ಆಸ್ಪತ್ರೆಯ ಮುಂದೆ ದಿನವಿಡೀ ಭಿಕ್ಷೆ ಬೇಡುವ ವಾಫಾ ಬ್ಯಾಂಕ್ ಸಿಬ್ಬಂದಿಗೆ ಚಿರಪರಿಚಿತಳು. ಹೀಗಾಗಿ ಆಕೆಯ ಅಕೌಂಟ್ ನಲ್ಲಿ ಇಷ್ಟು ದೊಡ್ಡ ಮೊತ್ತ ಗಮನಿಸಿದ ಸಿಬ್ಬಂದಿಗೆ ಅಚ್ಚರಿಯಾಗಿದೆ.
ಇನ್ನು ತನ್ನ ಖಾತೆಯಲ್ಲಿದ್ದ ಮೊತ್ತವನ್ನು ಬೇರೆ ಖಾತೆಗೆ ವರ್ಗಾಯಿಸಲು ವಾಫಾ ಚೆಕ್ ನೀಡಿದ್ದಳು. ಹೀಗಾಗಿ ಆಕೆ ಕೋಟ್ಯಧಿಪತಿ ಎಂಬ ವಿಚಾರ ಬಯಲಾಗಿದೆ. ಸೆಪ್ಟೆಂಬರ್ 30ರಂದು ವಾಘಾ ಬ್ಯಾಂಕ್ಗೆ ನೀಡಿರುವ ಚೆಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.