Asianet Suvarna News Asianet Suvarna News

ಮತಾಂಧತೆ ಬೆಂಬಲಿಸಿದ ವಿವಾದದ ಸುಳಿಯಲ್ಲಿ ಏರ್ ಟೆಲ್

ಖಾಸಗಿ ದೂರಸಂಪರ್ಕ ಕಂಪನಿ ಏರ್‌ಟೆಲ್‌ನ ಗ್ರಾಹಕ ಸೇವಾ ಕೇಂದ್ರದ ಮುಸ್ಲಿಂ ಸಿಬ್ಬಂದಿಯೊಬ್ಬರ ಜತೆ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೊಬ್ಬರು ನಿರಾಕರಿಸಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ
ಏರ್‌ಟೆಲ್ ಕಂಪನಿ ಮುಸ್ಲಿಮೇತರ ಪ್ರತಿನಿಧಿಯನು ಸಮಸ್ಯೆ  ಆಲಿಸಲು ನಿಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Woman asks Airtel’s customer service for ‘Hindu representative’, Twitterati seethe

ನವದೆಹಲಿ (ಜೂ. 20): ಖಾಸಗಿ ದೂರಸಂಪರ್ಕ ಕಂಪನಿ ಏರ್‌ಟೆಲ್‌ನ ಗ್ರಾಹಕ ಸೇವಾ ಕೇಂದ್ರದ ಮುಸ್ಲಿಂ ಸಿಬ್ಬಂದಿಯೊಬ್ಬರ ಜತೆ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೊಬ್ಬರು ನಿರಾಕರಿಸಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಏರ್‌ಟೆಲ್ ಕಂಪನಿ ಮುಸ್ಲಿಮೇತರ ಪ್ರತಿನಿಧಿಯನು ಸಮಸ್ಯೆ ಆಲಿಸಲು ನಿಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಆಗಿದ್ದೇನು?:

ಲಖನೌ ಮೂಲದ ಪೂಜಾ ಸಿಂಗ್ ಏರ್‌ಟೆಲ್ ಡಿಟಿಎಚ್ ಗ್ರಾಹಕಿ. ಕಳಪೆ ಸೇವೆ ಸಂಬಂಧ ಅವರು ಟ್ವೀಟರ್ ಮೂಲಕ ದೂರು ನೀಡಿದ್ದರು. ಏರ್‌ಟೆಲ್‌ನ ಶೋಯೆಬ್ ಅದನ್ನು ಪರಿಹರಿಸಲು ಯತ್ನಿಸಿದ್ದರು. ಆದರೆ ಇದನ್ನು ಒಪ್ಪದ ಪೂಜಾ, ತಾವು ಮುಸ್ಲಿಮರಾಗಿರುವುದರಿಂದ ತಮ್ಮ ಕಾರ್ಯನಿರ್ವಹಣೆ ನೈತಿಕತೆ ಬಗ್ಗೆ ನನಗೆ ನಂಬಿಕೆ ಇಲ್ಲ. ಹೀಗಾಗಿ ಹಿಂದು ಪ್ರತಿನಿಧಿ ನಿಯೋಜಿಸಿ ಎಂದು ಕೋರಿದ್ದರು. ಆ ಬಳಿಕ ಗಗನ್‌ಜೋತ್ ಎಂಬ ಪ್ರತಿನಿಧಿ ಪೂಜಾರನ್ನು ಸಂಪರ್ಕಿಸಿ ಸಹಾಯ ಮಾಡಿದ್ದರು. ಇದು ಆಕ್ರೋಶದ ಮೂಲ.

ಆದರೆ ಏರ್‌ಟೆಲ್ ಹೇಳುವುದೇ ಬೇರೆ. ಜಾತಿ,ಧರ್ಮದ ಆಧಾರದ ಮೇಲೆ ಗ್ರಾಹಕರನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ದೂರು ಇತ್ಯರ್ಥವಾಗದಿದ್ದ ಸಂದರ್ಭದಲ್ಲಿ ಗ್ರಾಹಕರು ಮತ್ತೊಮ್ಮೆ ಸಂಪರ್ಕಿಸಿದಾಗ, ಯಾರು ಲಭ್ಯವಿರುತ್ತಾರೋ ಅವರು ಪ್ರತಿಕ್ರಿಯಿಸುತ್ತಾರೆ. ಇದನ್ನು ತಪ್ಪಾಗಿ ವ್ಯಾಖ್ಯಾನಿಸಬಾರದು ಎಂದಿದೆ. 

Follow Us:
Download App:
  • android
  • ios