ಗಿಳಿಯನ್ನು ಹುಡುಕಿಕೊಟ್ಟವರಿಗೆ 25 ಸಾವಿರ ಬಹುಮಾನ ಘೋಷಿಸಿದ ಮಹಿಳೆ..!

ಆಕೆಯ ಮೂವರು ಮಕ್ಕಳು ಹಾಗೂ ಸಂಬಂಧಿಕರು ಗಿಳಿಯನ್ನು ಹುಡುಕಲು ವಾಟ್ಸ್'ಆ್ಯಪ್'ನಲ್ಲಿ ಅಭಿಯಾನವನ್ನೂ ಆರಂಭಿಸಿದ್ದಾರೆ.

Woman announces Rs 25000 reward for missing parrot

ತನ್ನ ಮುದ್ದಿನ ಗಿಳಿ ನಾಪತ್ತೆಯಾಗಿರುವುದರಿಂದ ಕಂಗಾಲಾಗಿರುವ ಮಹಿಳೆಯೊಬ್ಬರು ಆ ಅರಗಿಣಿಯನ್ನು ಹುಡುಕಿಕೊಟ್ಟವರಿಗೆ 25 ಸಾವಿರ ರೂಪಾಯಿ ಬಹುಮಾನವನ್ನುಘೋಷಿಸಿದ್ದಾರೆ.

ಬಿಹಾರದ ನಾವಡ ಜಿಲ್ಲೆಯ ಬಬಿತಾ ದೇವಿಯೇ ಈ ಬಹುಮಾನ ಘೋಷಿಸಿದ ಮಹಿಳೆ. ಗಿಳಿ ಜನವರಿ ಮೂರರಂದು ನಾಪತ್ತೆಯಾಗಿದೆ. ಅಂದಿನಿಂದ ಬಬಿತಾ ಸರಿಯಾಗಿ ಊಟವನ್ನೂ ಮಾಡುತ್ತಿಲ್ಲವಂತೆ..!

ಕಳೆದ ಎಂಟು ವರ್ಷಗಳಿಂದ ಕುಟುಂಬ ಸದಸ್ಯರಂತಿದ್ದ ಈ ಗಿಳಿ, ಮುಂಜಾನೆ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿತ್ತಂತೆ. ಈಗ ಗಿಳಿಯು ನಾಪತ್ತೆಯಾಗಿರುವುದರಿಂದ ಕಂಗಾಲಾಗಿರುವ ಬಬಿತಾ, ತನ್ನ ಮುದ್ದಿನ ಗಿಳಿಯನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿ ಕರಪತ್ರ ಹಂಚಿದ್ದಾರೆ.

ಆಕೆಯ ಮೂವರು ಮಕ್ಕಳು ಹಾಗೂ ಸಂಬಂಧಿಕರು ಗಿಳಿಯನ್ನು ಹುಡುಕಲು ವಾಟ್ಸ್'ಆ್ಯಪ್'ನಲ್ಲಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಆದರೆ ಇಲ್ಲಿಯವರೆಗೆ ಆ ಗಿಳಿ ಪತ್ತೆಯಾಗಿಲ್ಲ. ನೀವೊಮ್ಮೆ ಹುಡುಕಿ ಗಿಳಿ ನಿಮಗೆ ಸಿಕ್ಕರೂ ಸಿಗಬಹುದು.    

Latest Videos
Follow Us:
Download App:
  • android
  • ios