ಶಿವಮೊಗ್ಗ[ಜೂ.29] ಆಕೆ ಬದುಕಿನಲ್ಲಿ ಕರಾಳ ಅಧ್ಯಾಯವೊಂದು ಮುಗಿದು ಹೋಗಿತ್ತು. ಗಂಡ ಸತ್ತು ಹೋಗಿದ್ದು ಬದುಕಿನಲ್ಲಿ ನ್ಯಾಯಕ್ಕಾಗಿ ಇನ್ನು ಹೋರಾಟ ಮಾಡುತ್ತಿದ್ದಾಳೆ.  ಎರಡು ಪುಟಾಣಿ ಮಕ್ಕಳು ಸಹ ದಾಂಪತ್ಯದ ಬಳುವಳಿಯಾಗಿ ಆಕೆಯ ಜತೆಗಿವೆ. ಅವಳ ಹೋರಾಟ ಇದೀಗ ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೂ ಬಂದು ತಲುಪಿದೆ.

ಪತಿ ಮರಣದ ನಂತರ ಮೈದುನ ಸೇರಬೇಕಾದ ಆಸ್ತಿಯನ್ನು ಕೊಡದೆ ಲೈಂಗಿಕ ಶೋಷಣೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದ ಸಂತ್ರಸ್ತೆಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ. ಮೈದುನ ಗಿರೀಶ ಮತ್ತು ಮಾವ ಕೃಷ್ಣಪ್ಪ ನನ್ನನ್ನು  ಮನೆಯಿಂದ ಹೊರ ಹಾಕಿಯಾಗಿದೆ. ನನ್ನೊಂದಿಗೆ ಸಹಕರಿಸಿದರೆ ಮಾತ್ರ ಆಸ್ತಿಯಲ್ಲಿ ಗಂಡನ ಪಾಲು ನೀಡುತ್ತೇನೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಮೈದುನ ಗಿರೀಶ ನನ್ನನ್ನು ಹಲವಾರು ಸಾರಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಆರೋಪಿಸಿದ್ದಾಳೆ. ಕುಟುಂಬಕ್ಕೆ ಸೇರಿದ 5 ಎಕರೆ ಜಮೀನು ಮತ್ತು ಎರಡು ಮನೆಗಳಲ್ಲಿ ತನ್ನ ಗಂಡನ ಪಾಲನ್ನು ಕೊಡಿಸಬೇಕು ಎಂದು ಪೊಲೀಸರಿಗೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.