ಮಸಾಜ್‌ ಮಾಡುವಾಗ ಕರ್ಟನ್‌ ಹಿಂದೆ ಯಾರೋ ನಿಂತಿರುವ ಹಾಗೆ ಕಂಡಿದ್ದು, ಈ ಬಗ್ಗೆ ಮಹಿಳೆ ಪ್ರಶ್ನಿಸಿದ್ದಾರೆ. ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಯಾರೂ ಇಲ್ಲ. ಕರ್ಟನ್‌ (ಕಿಟಕಿ ಪರದೆ) ಹಾಕಲಾಗಿದೆ ಎಂದು ಸಬೂಬು ಹೇಳಿದ್ದರು.
ಬೆಂಗಳೂರು: ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಮಸಾಜ್ ಹೆಸರಿನಲ್ಲಿ ಮಹಿಳೆಯರ ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಯಲಹಂಕದಲ್ಲಿ ಆಯುರ್ವೇದಿಕ್ ಹಾಗೂ ಹೋಮಿಯೋ ಕ್ಲಿನಿಕ್ ಬೋರ್ಡ್ ಹಾಕಿಕೊಂಡು ಮಸಾಜ್ ಮಾಡಲಾಗುತ್ತಿತ್ತು. ಮೈ ನೋವು ನಿವಾರಣೆಗೆ ಮಹಿಳೆಯೊಬ್ಬರು ಮಸಾಜ್ ಮಾಡಿಸಿಕೊಳ್ಳಲು ಮಂಗಳವಾರ ರಾತ್ರಿ ಕ್ಲಿನಿಕ್ಗೆ ಬಂದಿದ್ದರು.
ಮಸಾಜ್ ಮಾಡುವಾಗ ಕರ್ಟನ್ ಹಿಂದೆ ಯಾರೋ ನಿಂತಿರುವ ಹಾಗೆ ಕಂಡಿದ್ದು, ಈ ಬಗ್ಗೆ ಮಹಿಳೆ ಪ್ರಶ್ನಿಸಿದ್ದಾರೆ. ಕ್ಲಿನಿಕ್ನ ಮಹಿಳಾ ಸಿಬ್ಬಂದಿ ಯಾರೂ ಇಲ್ಲ. ಕರ್ಟನ್ (ಕಿಟಕಿ ಪರದೆ) ಹಾಕಲಾಗಿದೆ ಎಂದು ಸಬೂಬು ಹೇಳಿದ್ದರು.
ಇದಕ್ಕೆ ಒಪ್ಪದ ಮಹಿಳೆ ಅನುಮಾನದಿಂದ ಹೋಗಿ ಕಾರ್ಟನ್ ತೆಗೆದಾಗ ರಹಸ್ಯ ಕ್ಯಾಮೆರಾದಿಂದ ಚಿತ್ರೀಕರಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಕ್ಲಿನಿಕ್ ಸಿಬ್ಬಂದಿ ಮೇಲೆ ಕೂಗಾಡಿ ಜಗಳ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಯಲಹಂಕ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಯಾವುದೇ ಕ್ಯಾಮೆರಾ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಸಂಬಂಧ ಇಲ್ಲಿ ತನಕ ಯಾರು ದೂರು ನೀಡಿಲ್ಲ. ಸೂಕ್ತ ಸಾಕ್ಷ್ಯಪತ್ತೆಯಾದರೆ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗು ವುದು ಎಂದು ಡಿಸಿಪಿ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
