ಪತಿಗಾಗಿ ಮೊದಲ ಹಾಗೂ ಎರಡನೇ ಪತ್ನಿಯರು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಕೊಪ್ಪಳದ ಬೆಂಕಿನಗರದಲ್ಲಿ ನಡೆದಿದೆ. ವಿಜಯಶ್ರೀ ಹಾಗೂ ಶಿಲ್ಪಾ ಹೊಡೆದಾಡಿಕೊಂಡ ಮಹಿಳೆಯರು.
ಕೊಪ್ಪಳ(ಸೆ.30): ಪತಿಗಾಗಿ ಮೊದಲ ಹಾಗೂ ಎರಡನೇ ಪತ್ನಿಯರು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ಕೊಪ್ಪಳದ ಬೆಂಕಿನಗರದಲ್ಲಿ ನಡೆದಿದೆ. ವಿಜಯಶ್ರೀ ಹಾಗೂ ಶಿಲ್ಪಾ ಹೊಡೆದಾಡಿಕೊಂಡ ಮಹಿಳೆಯರು.
ಶಿವಮೊಗ್ಗ ಜಿಲ್ಲೆಯ ಅಟ್ಟಿ ಮಂಜುನಾಥನನ್ನು 2013 ರಲ್ಲಿ ವಿಜಯಶ್ರೀಯನ್ನು ವಿವಾಹವಾಗಿದ್ದ. ನಂತರ ಮೂರು ವರ್ಷದ ಸಂಸಾರ ನಡೆಸಿದ ಮಂಜುನಾಥ 2016 ರ ಅಕ್ಟೋಬರ್ ರಲ್ಲಿ ಮನೆ ಎದುರಿನ ಶಿಲ್ಪಾರನ್ನು ಎರಡನೇ ಮದುವೆಯಾದ. ಶಿಲ್ಪಾಳನ್ನು ಮದುವೆಯಾದ ಮಂಜುನಾಥ ಮೊದಲ ಪತ್ನಿ ವಿಜಯಶ್ರೀ ಹೊಡೆದು ಮನೆಯಿಂದ ಹೊರ ಹಾಕಿದ್ದ. ಇದರಿಂದ ಕಂಗಾಲಾದ ವಿಜಯಶ್ರೀ ಇಂದು ಶಿಲ್ಪಾ ಮನೆಗೆ ನುಗ್ಗಿ ಆಕೆ , ಆಕೆ ತಾಯಿಗೆ ಹೊಡೆದಿದ್ದಾರೆ.
ಇಬ್ಬರು ಪತ್ನಿಯರು ಪರಸ್ಪರ ಜಡೆ ಹಿಡಿದು ಬಡಿದಾಡಿಕೊಂಡರು. ಹೆಂಡತಿಯರ ಜಗಳದಿಂದ ಸ್ಥಳೀಯರಿಗೆ ಮಾತ್ರ ಭರ್ಜರಿ ಮನರಂಜನೆ ದೊರೆಯಿತು.
