ಚಾಲಕನಿಲ್ಲದೇ  ವಾಡಿ ರೈಲ್ವೆ ನಿಲ್ದಾಣದಿಂದ ರೈಲ್ವೆ ಏಂಜಿನ್ 13 ಕಿಮೀ ಸಂಚರಿಸಿದ ಆಶ್ಚರ್ಯಕರ  ಘಟನೆ ಕಲುಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್'ನಲ್ಲಿ ನಡೆದಿದೆ.

ಕಲುಬುರಗಿ (ನ.08): ಚಾಲಕನಿಲ್ಲದೇ ವಾಡಿ ರೈಲ್ವೆ ನಿಲ್ದಾಣದಿಂದ ರೈಲ್ವೆ ಏಂಜಿನ್ 13 ಕಿಮೀ ಸಂಚರಿಸಿದ ಆಶ್ಚರ್ಯಕರ ಘಟನೆ ಕಲುಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್'ನಲ್ಲಿ ನಡೆದಿದೆ.

ಚೆನ್ನೈ- ಮುಂಬೈ ರೈಲಿಗೆ ಜೋಡಣೆಯಾಗಬೇಕಿದ್ದ ಎಂಜಿನ್ ಚಾಲಕರ ನಿರ್ಲಕ್ಷ್ಯದಿಂದ ವಾಡಿಯಿಂದ ನಾಲವಾರದವರೆಗೆ ಚಾಲಕನಿಲ್ಲದೇ ಸಂಚರಿಸಿದೆ. ಗಮನಕ್ಕೆ ಬಂದ ತಕ್ಷಣ ರೈಲ್ವೇ ಸಿಬ್ಬಂದಿಗಳು ಬೈಕ್'ನಲ್ಲಿ ತೆರಳಿ ನಾಲವಾರ ಬಳಿ ಏಂಜಿನ್‌'ನನ್ನು ತಡೆಹಿಡಿದಿದ್ದಾರೆ. ರೈಲ್ವೇ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ‌ ಪ್ರಯಾಣಿಕರು, ರೈಲ್ವೇ ಇಲಾಖೆ ನೆಮ್ಮದಿಯ‌ ನಿಟ್ಟಿಸಿರು ಬಿಟ್ಟಿದೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)