ನವದೆಹಲಿ[ಮೇ.31]: ನಿರ್ಮಲಾ ಸೀತಾರಾಮನ್ ಗೆ ಎರಡನೇ ಅವಧಿಯಲ್ಲೂ ಪವರ್ ಫುಲ್ ಖಾತೆ ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಈ ಹಿಂದೆ ನಿಭಾಯಿಸುತ್ತಿದ್ದ ಹಣಕಾಸು ಇಲಾಖೆ ಜವಾಬ್ದಾರಿ ಈ ಬಾರಿ ನಿರ್ಮಲಾ ಸೀತಾರಾಮನ್ ಹೆಗಲೇರಿದೆ. ಈ ಮೂಲಕ ಸ್ವತಂತ್ರ ಭಾರತದ ಎರಡನೇ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ 1970ರಲ್ಲಿ ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಈ ಖಾತೆ ನಿರ್ವಹಿಸಿದ್ದರು.

ಹಣಕಾಸು ಖಾತೆಗೆ ನಿರ್ಮಲಾ ಹೆಸರು ಶಿಫಾರಸು ಮಾಡಿದ್ದೇ ಅರುಣ್ ಜೇಟ್ಲಿ

ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಕೆಲ ದಿನಗಳ ಹಿಂದಷ್ಟೇ ತನಗೆ ಯಾವುದೇ ಖಾತೆ ಬೇಡ ಎಂದು ಮೋದಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅರುಣ್ ಜೇಟ್ಲಿ ಬಳಿ ಖಾತೆ ನಿಭಾಯಿಸಲು ಯಾರು ಸಮರ್ಥರು ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೇಟ್ಲಿ ಅರ್ಥಶಾಸ್ತ್ರ ಓದಿಕೊಂಡಿರುವ ನಿರ್ಮಲಾ ಹಣಕಾಸು ವ್ಯವಹಾರ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಮೋದಿ ಸಂಪುಟದ ಖಾತೆ ಹಂಚಿಕೆ: ಕರ್ನಾಟಕದ ಸಚಿವರಿಗೆ ಯಾವ-ಯಾವ ಖಾತೆ?

ಈ ಹಿಂದೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾಗಿ ನೇಮಕಗೊಂಡಾಗ, ಆ ಖಾತೆ ನಿಭಾಯಿಸಲು ಅವರು ಅಸಮರ್ಥರು ಎಂದು ಹಲವರು ಆರೋಪಿಸಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಹುಸಿಯಾಗಿದ್ದ ನಿರ್ಮಲಾ ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ಎರಡನೇ ಅವಧಿಯಲ್ಲಿ ಮತ್ತೊಂದು ಮಹತ್ತರ ಜವಾಬ್ದಾರಿ ಅವರ ಹೆಗಲೇರಿದೆ.