ನಿನ್ನೆ ದೀಪಾವಳಿ ಅಮವಾಸ್ಯೆಯ ರಾತ್ರಿ ಇವರ ಹೊಲಕ್ಕೆ ತೆರಳಿದ ದುರ್ಷರ್ಮಿಗಳು, ಸಮಾಧಿ ಅಗೆದು ಶವದ ರುಂಡ ಮತ್ತು ಒಂದು ಕೈ ಕತ್ತರಿಸಿಕೊಂಡು ಹೋಗಿದ್ದಾರೆ.
ಕಲಬುರಗಿ ಜಿಲ್ಲೆಯ ಫರಹತಾಬಾದ್ ನಲ್ಲಿ ವಿರೂಪಾಕ್ಷಪ್ಪ ಸಜ್ಜನ ಎನ್ನುವ 75 ವರ್ಷದ ವ್ಯಕ್ತಿ ಕಳೆದ ಏಳು ತಿಂಗಳ ಹಿಂದೆ ಸಾವಿಗೀಡಾಗಿದ್ರು. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಫರಹತಾಬಾದ ಗ್ರಾಮದ ಸ್ವಂತ ಹೊಲದಲ್ಲಿ ನೆರವೇರಿಸಲಾಗಿತ್ತು. ನಿನ್ನೆ ದೀಪಾವಳಿ ಅಮವಾಸ್ಯೆಯ ರಾತ್ರಿ ಇವರ ಹೊಲಕ್ಕೆ ತೆರಳಿದ ದುರ್ಷರ್ಮಿಗಳು, ಸಮಾಧಿ ಅಗೆದು ಶವದ ರುಂಡ ಮತ್ತು ಒಂದು ಕೈ ಕತ್ತರಿಸಿಕೊಂಡು ಹೋಗಿದ್ದಾರೆ. ಈ ಘಟನೆಯಿಂದ ಸಜ್ಜನ ಕುಟುಂಬದಲ್ಲಿ ಮಾತ್ರವಲ್ಲದೇ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದು ವಾಮಾಚಾರಿಗಳ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ.
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
