ನವೆಂಬರ್ 13 ರಿಂದ ಚಳಿಗಾಲದ ಅಧಿವೇಶನ
ಬೆಳಗಾವಿ(ಅ.14): ಈ ವರ್ಷದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನವೆಂಬರ್ 13ರಿಂದ 10 ದಿನಗಳ ಕಾಲ ನಡೆಯಲಿದೆ.
ಅಧಿವೇಶನದ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಭಾಪತಿ ಡಿ.ಎಸ.ಶಂಕರಮೂರ್ತಿ, ಅಧಿವೇಶನ ಹಿನ್ನಲೆ ಪೂರ್ವ ಸಿದ್ದತೆ, ವಸತಿ, ಊಟ, ಸದನದ ಅಗತ್ಯಗಳು, ಭದ್ರತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಬೆಳಗಾವಿ ಸೌಧ ವರ್ಷ ಪೂರ್ತಿ ಕೆಲಸ ಮಾಡಬೇಕು. ಬೆಳಗಾವಿ ಸೌಧಕ್ಕೆ ಪ್ರಮುಖ ಕಚೇರಿಗಳು ಸ್ಥಳಾಂತರ ಆಗಬೇಕು. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸಬೇಕು. ಈ ಎಲ್ಲ ಬೇಡಿಕೆಗಳು ಈಡೇರಬೇಕು ಎಂಬುದು ನನ್ನ ಆಸೆ. ಆದರೆ ಇದನ್ನು ಅನುಷ್ಠಾನಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಸಭಾಧ್ಯಕ್ಷ ಕೋಳಿವಾಡ ತಿಳಿಸಿದರು.
