Asianet Suvarna News Asianet Suvarna News

ತಾಂಜಾನಿಯಾದಲ್ಲಿ ಸಿಕ್ಕ ವಿಮಾನದ ರೆಕ್ಕೆಯು ಮಲೇಷ್ಯಾದ ಎಂಹೆಚ್370 ವಿಮಾನಕ್ಕೆ ಸೇರಿದ್ದು

wing flap found in tanzania confirmed to be part of mh370 flight

ನವದೆಹಲಿ(ಸೆ. 15): ಎರಡು ವರ್ಷಗಳ ಹಿಂದೆ ಮಲೇಷ್ಯಾದಿಂದ ಚೀನಾಗೆ ಹೊರಟು ದಿಢೀರ್ ನಾಪತ್ತೆಯಾಗಿದ್ದ ಎಂಹೆಚ್370 ವಿಮಾನದ ಮತ್ತೊಂದು ಅವಶೇಷ ಪತ್ತೆಯಾಗಿದೆ. ತಾಂಜಾನಿಯಾದ ಪೆಂಬಾ ದ್ವೀಪದ ಸಮುದ್ರ ತೀರದಲ್ಲಿ ಇತ್ತೀಚೆಗೆ ಕಂಡುಬಂದ ವಿಮಾನದ ರೆಕ್ಕೆಯ ಅವಶೇಷವು ಇದೇ ಮಲೇಷ್ಯಾ ವಿಮಾನದ ಭಾಗವೆಂಬುದು ದೃಢಪಟ್ಟಿದೆ. ಇದರೊಂದಿಗೆ ಈವರೆಗೆ ಮಲೇಷ್ಯಾ ವಿಮಾನದ ಐದು ಅವಶೇಷಗಳು ಸಿಕ್ಕಂತಾಗಿವೆ.

2014ರ ಮಾರ್ಚ್ 8ರಂದು 239 ಜನರನ್ನು ಹೊತ್ತ ಬೋಯಿಂಗ್ 777 ವಿಮಾನವು ಕೌಲಾಲಂಪುರದಿಂದ ಬೀಜಿಂಗ್'ಗೆ ಹೊರಟಿತ್ತು. ಏರ್'ಪೋರ್ಟ್'ನಿಂದ ಹೊರಟು ಒಂದು ಗಂಟೆಗೂ ಮುನ್ನವೇ ಸೌಥ್ ಚೀನಾ ಸಾಗರ ಪ್ರದೇಶದಲ್ಲಿ ಏರ್'ಟ್ರಾಫಿಕ್ ಕಂಟ್ರೋಲ್'ನ ಸಂಪರ್ಕದಿಂದ ವಿಮಾನ ಕಡಿತಗೊಂಡಿತು. ಆ ನಂತರ ವಿಮಾನ ಎಲ್ಲಿ ಹೋಯಿತೆಂಬುದೇ ಗೊತ್ತಾಗಲಿಲ್ಲ. ಅನೇಕ ರೀತಿಯ ಸುದ್ದಿಗಳು ಹರಿದಾಡಲಾರಂಭಿಸಿದವು. ಏಲಿಯನ್'ಗಳ ದಾಳಿಯಾಗಿದೆ ಎಂದೋ, ಉಗ್ರರಿಂದ ಅಪಹರಣವಾಗಿದೆ ಎಂದೋ ವಿವಿಧ ರೀತಿಯ ಕಾನ್ಸಿಪಿರಸಿ ಥಿಯರಿಗಳು ಚಲಾವಣೆಯಲ್ಲಿದ್ದವು. ವಿಮಾನವು ಸಾಗರದಲ್ಲಿ ಪತನಗೊಂಡಿರಬಹುದೆಂಬ ಅಂದಾಜಿನಲ್ಲಿ ತಿಂಗಳುಗಟ್ಟಲೆ ವಿವಿಧ ದೇಶಗಳು ಶೋಧ ಕಾರ್ಯದಲ್ಲಿ ಹರಸಾಹಸ ಮಾಡಿದವು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ. ಈ ವಿಮಾನ ನಾಪತ್ತೆಯು ವಿಶ್ವದ ಅತ್ಯಂತ ನಿಗೂಢ ಪ್ರಕರಣಗಳಲ್ಲೊಂದೆನಿಸಿತ್ತು.

ಕಳೆದ ವರ್ಷ ಮಡಗಾಸ್ಕರ್'ನಲ್ಲಿ ಸಿಕ್ಕ ವಿಮಾನದ ಅವಶೇಷಗಳು ಇದೇ ವಿಮಾನದೆಂಬುದು ಇತ್ತೀಚೆಗೆ ದೃಢಪಟ್ಟಿದೆ. ಇದರೊಂದಿಗೆ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿರುವುದು ಖಚಿತವಾಗಿದೆ

Follow Us:
Download App:
  • android
  • ios