Asianet Suvarna News Asianet Suvarna News

ನಾಳೆಯಿಂದ ಕಾರವಾರದಲ್ಲಿ ವೈನ್ ಮೇಳ ಆರಂಭ

15ಕ್ಕೂ ಹೆಚ್ಚಿನ ಹೆಸರಾಂತ ಕಂಪನಿಯ 150ಕ್ಕೂ ಹೆಚ್ಚು ವಿವಿಧ ಬಗೆಯ ವೈನ್‌ಗಳು ಮೇಳದಲ್ಲಿ ಲಭ್ಯವಾಗಲಿದೆ. ಸ್ಥಳೀಯವಾಗಿ ತಯಾರಿಸಿದ ಹಾಗೂ ಹೊರಗಡೆಯಿಂದ ಆಮದು ಮಾಡಿಕೊಂಡ ವೈನ್‌ಗಳು ಸಿಗಲಿವೆ. ಮೂರು ದಿನಗಳ ಕಾಲ ವೈನ್‌ಪ್ರಿಯರ ಹಬ್ಬ ನಡೆಯಲಿದೆ.

Wine Feast at Karwar frome Tomorrow

ಕಾರವಾರ(ನ.23): ನ. 24ರಿಂದ 3 ದಿನಗಳ ಕಾಲ ನಗರದ ಕೋಡಿಬಾಗದಲ್ಲಿನ ಕಾಳಿ ರಿವರ್ ಗಾರ್ಡನ್‌ನಲ್ಲಿ ನಡೆಯುವ ವೈನ್ ಫೆಸ್ಟಿವಲ್(ದ್ರಾಕ್ಷಾರಸ ಉತ್ಸವ)ಗೆ ಸಿದ್ಧತೆ ಆರಂಭಗೊಂಡಿದೆ.

15ಕ್ಕೂ ಹೆಚ್ಚಿನ ಹೆಸರಾಂತ ಕಂಪನಿಯ 150ಕ್ಕೂ ಹೆಚ್ಚು ವಿವಿಧ ಬಗೆಯ ವೈನ್‌ಗಳು ಮೇಳದಲ್ಲಿ ಲಭ್ಯವಾಗಲಿದೆ. ಸ್ಥಳೀಯವಾಗಿ ತಯಾರಿಸಿದ ಹಾಗೂ ಹೊರಗಡೆಯಿಂದ ಆಮದು ಮಾಡಿಕೊಂಡ ವೈನ್‌ಗಳು ಸಿಗಲಿವೆ. ಮೂರು ದಿನಗಳ ಕಾಲ ವೈನ್‌ಪ್ರಿಯರ ಹಬ್ಬ ನಡೆಯಲಿದೆ. ದ್ರಾಕ್ಷಿ ಬೆಳೆಗಾರರನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ, ಕೊಡಗು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಶಿವಮೊಗ್ಗ ಒಳಗೊಂಡು ಹಲವಾರು ಜಿಲ್ಲೆಗಳಲ್ಲಿ ವೈನ್ ಮೇಳ ಈಗಾಗಲೇ ನಡೆದಿದೆ.

ನ. 24, 25 ಹಾಗೂ 26ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೇಳಕ್ಕೆ ಸಾರ್ವಜನಿಕರು ತೆರಳಲು ಅವಕಾಶವಿದೆ. ಪ್ರತಿಯೊಬ್ಬರಿಗೂ 20 ರು. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಜತೆಗೆ ಪ್ರತಿ ವೈನ್ ಮೇಲೆ ಶೇ. 10ರಷ್ಟು ರಿಯಾಯಿತಿ ಕೂಡಾ ನೀಡಲಾಗುತ್ತಿದೆ. ರೋಸ್, ಗ್ರೋವರ್, ಸುಲಾ, ಎಸ್‌ಡಿಯು, ರೀಕೋ ಒಳಗೊಂಡು ಹೆಸರಾಂತ ಬ್ರಾಂಡ್‌ಗಳ ವೈನ್ ಪ್ರದರ್ಶನ, ಮಾರಾಟ ಮೇಳದಲ್ಲಿ ನಡೆಯುತ್ತದೆ.

200 ರು. ದಿಂದ 3000 ರು.ವರೆಗಿನ ಮೌಲ್ಯದ ದ್ರಾಕ್ಷಾರಸ ಇಲ್ಲಿ ಲಭ್ಯವಿರಲಿದೆ. ವಿದೇಶಗಳಿಗೆ ರಫ್ತು ಮಾಡುವ ವೈನ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ವೈನ್ ಬೋರ್ಡ್ ತಯಾರಿ ನಡೆಸಿದೆ. ರಾಜ್ಯದಿಂದ 12 ಹಾಗೂ ಮಹಾರಾಷ್ಟ್ರದಿಂದ 3 ವೈನರಿಗಳು ಪಾಲ್ಗೊಳ್ಳಲು ಸಹಮತ ಸೂಚಿಸಿವೆ. ವೈನ್ ಬಗ್ಗೆ ಅರಿವು, ಆಹಾರದ ಜತೆಗೆ ವೈನ್ ಸೇವನೆ ಕುರಿತು ಮಾಹಿತಿ ಕೂಡಾ ನೀಡಲಾಗುವುದು. ಜನರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸುವುದು ಮುಖ್ಯ ಉದ್ದೇಶವಾಗಿದೆ. ಹೀಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈನ್ ಮೇಳ ಆಯೋಜಿಸಲಾಗುತ್ತಿದೆ.

Follow Us:
Download App:
  • android
  • ios