ವಿಜಯಪುರ [ಆ.15]: ಕರ್ನಾಟಕ ರಾಜಕೀಯದ ಫೋನ್ ಕದ್ದಾಲಿಕೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.  ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸಿಎಂಗೆ ಪತ್ರ ಬರೆಯುವುದಾಗಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾತನಾಡಿದ  ಮಾಜಿ ಗೃಹ ಸಚಿವ ಎಂ.ಬಿ‌. ಪಾಟೀಲ್, ಇದು ಗಂಭೀರ ವಿಚಾರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.  ಕೆಲವರು ಫೋನ್ ಕದ್ದಾಲಿಕೆ ನಡೆದಿಲ್ಲ ಎನ್ನುತ್ತಿದ್ದಾರೆ. ಕೆಲವರು ಫೋನ್ ಕದ್ದಾಲಿಕೆ ನಡೆದಿದೆ ಎನ್ನುತ್ತಿದ್ದಾರೆ. ನನಗೆ ಈ ಬಗ್ಗೆ ಖಚಿತತೆ ಇಲ್ಲ. ಫೋನ್ ಟ್ಯಾಪ್ ಆಗಿದೆಯೋ ಇಲ್ಲವೋ ತಿಳಿದಿಲ್ಲ ಎಂದರು. 

ಪೋನ್ ಕದ್ದಾಲಿಕೆ: ಹೆಸರು ಕೇಳಿಬಂದ ಅಧಿಕಾರಿಗಳಿಗೆ BSY ಬಿಗ್ ಶಾಕ್?

ಈ ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು.  ನಮಗೆ ಸಿಬಿಐ ಮೇಲೆ ನಂಬಿಕೆ ಇಲ್ಲ. ನಾನು ಈ ಹಿಂದೆಯೋ ಇದರ ಬಗ್ಗೆ ಹೇಳಿದ್ದೇನೆ. ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದ ಪರಿಣಾದ ಬಗ್ಗೆ ನೋಡಿದ್ದೇವೆ. ಮೂರು ತಿಂಗಳ ಕಾಲಾವಧಿ ಪಡೆದು ಈ ಬಗ್ಗೆ ತನಿಖೆ ನಡೆಸಬೇಕು ಎಂದರು.

ತನಿಖೆಯಲ್ಲಿ ಯಾರಾದರೂ ತಪ್ಪಿತಸ್ಥರಾಗಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಹಾಗೂ ಇದಕ್ಕೆ ಕಾರಣರಾಗಿರುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ಹೇಳಿದರು.