ಕೆರೆ ಒತ್ತುವರಿ ಮೇಲಿನ ಸದನ ಸಮಿತಿ(ಕೋಳಿವಾಡ್) ವರದಿ ಹಾಗೂ ಪರಿಷ್ಕೃತ ಆರ್.ಎಂ.ಪಿ ಮಾಸ್ಟರ್ ಪ್ಲಾನ್-2031 ನಮ್ಮ ಬೆಂಗಳೂರನ್ನು ಹಿಂಪಡೆಯಲು ಸಹಕಾರಿಯೇ? ಎನ್ನುವ ಕುರಿತಂತೆ ಯುನೈಟೆಡ್ ಬೆಂಗಳೂರು ವತಿಯಿಂದ ಡಿಸೆಂಬರ್ 9ರಂದು ಎನ್'ಜಿಓ ಹಾಲ್(ಕಬ್ಬನ್ ಪಾರ್ಕ್)ನಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು(ಡಿ.08): ನಮ್ಮೆಲ್ಲರ ಭವಿಷ್ಯಕ್ಕೆ ಬೆಂಗಳೂರು ನಾಗರೀಕರು ಒಗ್ಗೂಡಬೇಕಾಗಿದೆ.

ಕೆರೆ ಒತ್ತುವರಿ ಮೇಲಿನ ಸದನ ಸಮಿತಿ(ಕೋಳಿವಾಡ್) ವರದಿ ಹಾಗೂ ಪರಿಷ್ಕೃತ ಆರ್.ಎಂ.ಪಿ ಮಾಸ್ಟರ್ ಪ್ಲಾನ್-2031 ನಮ್ಮ ಬೆಂಗಳೂರನ್ನು ಹಿಂಪಡೆಯಲು ಸಹಕಾರಿಯೇ? ಎನ್ನುವ ಕುರಿತಂತೆ ಯುನೈಟೆಡ್ ಬೆಂಗಳೂರು ವತಿಯಿಂದ ಡಿಸೆಂಬರ್ 9ರಂದು ಎನ್'ಜಿಓ ಹಾಲ್(ಕಬ್ಬನ್ ಪಾರ್ಕ್)ನಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಬೆಳಗ್ಗೆ 9.30ಯಿಂದ 1.30ವರೆಗೆ ನಡೆಯಲಿದ್ದು, ಚರ್ಚೆಯಲ್ಲಿ ಪಾಲ್ಗೊಳ್ಳಲು bit.ly/2AWIQOj  ಇಲ್ಲಿ ನೋಂದಾಯಿಸಿಕೊಳ್ಳಲು ಕೋರಿದೆ.

ಕೋಳಿವಾಡ್ ಸಮಿತಿ ವರದಿ ಕುರಿತಂತೆ ಮುಖ್ಯ ಭಾಷಣಕಾರರಾಗಿ ಶ್ರೀ ಎನ್ ಎಸ್ ಮುಕುಂದ, ಸಂಸ್ಥಾಪಕ ಅಧ್ಯಕ್ಷರು, ಸಿಟಿಜನ್ ಆ್ಯಕ್ಷನ್ ಫೋರಂ, ಕುಮಾರಿ ವೀಣಾ ಶ್ರೀನಿವಾಸನ್, ATREE, ಎಸ್. ವಿಶ್ವನಾಥ್, ಜಲ ಸಂರಕ್ಷಣಾ ತಜ್ಞರು, ರಾಮ್ ಪ್ರಸಾದ್, ಫ್ರೆಂಡ್ಸ್ ಆಫ್ ಲೇಕ್ಸ್, ಸಜ್ಜನ್ ಪೂವಯ್ಯ - ಸೀನಿಯರ್ ಅಡ್ವೋಕೇಟ್, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಪಿಟಿಐ ಪತ್ರಕರ್ತ ಜಿ. ಮಂಜುಸಾಯಿನಾಥ್ ನಡೆಸಿಕೊಡಲಿದ್ದಾರೆ.

ಇನ್ನು ಆರ್'ಎಂಪಿ 2031 ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿವಿಜಯನ್ ಮೆನನ್- ಸದಸ್ಯರು, ಸಿಟಿಜನ್ ಆ್ಯಕ್ಷನ್ ಫೋರಂ, ನಿತಿನ ಶೇಷಾದ್ರಿ- ಕೋರಮಂಗಲ 3ನೇ ಬ್ಲಾಕ್ ನಿವಾಸಿ ಕ್ಷೇಮಾಭಿವೃದ್ದಿ ಸಂಘ, ನರೇಶ್ ನರಸಿಂಹನ್- ವಾಸ್ತುಶಿಲ್ಪಿ ಮತ್ತು ನಗರ ತಜ್ಞರು, ಕುಮಾರಿ ಸ್ನೇಹಾ ನಂದಿಹಾಳ್- ಐ ಚೇಂಜ್ ಇಂದಿರಾನಗರ್, ಎನ್. ಎಸ್ ರಮಾಕಾಂತ್, ಘನತ್ಯಾಜ್ಯ ನಿರ್ವಹಣೆ ತಜ್ಞರು, ಸಜ್ಜನ್ ಪೂವಯ್ಯ - ಸೀನಿಯರ್ ಅಡ್ವೋಕೇಟ್, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಪಾಲ್ಗೊಳ್ಳಲಿದ್ದಾರೆ. ಸಿಟಿಜನ್ ಆ್ಯಕ್ಷನ್ ಫೋರಂ ಅಧ್ಯಕ್ಷರಾದ ಡಿ.ಎಸ್ ರಾಜಶೇಖರ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ