ಶಿವಮೊಗ್ಗ [ಜು.05] : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಬಿಜೆಪಿಗರು ರಾಜಕೀಯ ಅಸ್ಥಿರ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು. 

ಪುತ್ತೂರು ಗ್ಯಾಂಗ್ ರೇಪ್: 'ಶೋಭಾ ಕರಂದ್ಲಾಜೆ ಈಗ ಬಾಯಿ ಬಡ್ಕೊಳ್ಳಲ್ಲ ಯಾಕೆ?'

ಯಾವುದೇ ಕಾರಣಕ್ಕೂ ಬಿಜೆಪಿ ನಾಯಕ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ. ನಾನು ನನ್ನ ಮನೆ ದೇವರ ಮೇಲೆ ಹರಕೆ ಹಾಕಿದ್ದೇನೆ ಎಂದು ಬೇಳೂರು ಹೇಳಿದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಪರೇಷನ್ ಕಾಂಗ್ರೆಸ್ ಮಾಡಬಹುದು. ಅವರ ಸಂಪರ್ಕದಲ್ಲಿ ಕೆಲವು ಬಿಜೆಪಿ ಶಾಸಕರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.