ಮುಂಬೈ (ಅ.12): ಸರ್ಜಿಕಲ್ ದಾಳಿಯ ಸಂಪೂರ್ಣ ಕ್ರೆಡಿಟನ್ನು ಪ್ರಧಾನಿ ನರೇಂದ್ರ ಮೋದಿ ಜೊತೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕರ್ ಹೇಳಿದ್ದಾರೆ.

ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಬಹುಪಾಲು ಯಶಸ್ಸು ಮೋದಿಗೆ ಸಲ್ಲಬೇಕು. ಇಂತದ್ದೊಂದು ಪ್ರಮುಖ ನಿರ್ಧಾರ ತೆಗೆದುಕೊಂಡ ಪ್ರಧಾನಿಯವರ ನಡೆ ಶ್ಲಾಘನೀಯ. ಜನರು ಕೂಡಾ ಸಂತುಷ್ಟರಾಗಿದ್ದಾರೆ. ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಸಹ ಈ ಯಶಸ್ಸನ್ನು ಮೋದಿ ಜೊತೆ ಹಂಚಿಕೊಳ್ಳಬಹುದು ಎಂದು ಪಾರಿಕರ್ ಕಟುಕಿದ್ದಾರೆ.