ಪಕ್ಷವನ್ನು ಉಳಿಸಲು ನಿರಂತರ ಹೋರಾಟ ಮಾಡುವುದಾಗಿ ಹೇಳಿದ ಅವರು, ನನ್ನ ಕೊನೆ ಉಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುವುದಾಗಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಚೆನ್ನೈ (ಫೆ.16): ಮುಖ್ಯಮಂತ್ರಿಯಾಗಿ ಮುಂದುವರಿಯುವ ಕನಸು ಭಗ್ನವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪನ್ನೀರ್​ ಸೆಲ್ವಂ, ಯಾವುದೇ ಕಾರಣಕ್ಕೂ ಪಕ್ಷವನ್ನು ಒಡೆಯಲು ಬಿಡಲ್ಲ, ಪಕ್ಷವನ್ನು ಒಂದು ಕುಟುಂಬದ ತೆಕ್ಕೆಗೆ ಸಿಲುಕಿಸಲು ಬಿಡಲ್ಲ ಎಂದಿದ್ದಾರೆ.

ಪಕ್ಷವನ್ನು ಉಳಿಸಲು ನಿರಂತರ ಹೋರಾಟ ಮಾಡುವುದಾಗಿ ಹೇಳಿದ ಅವರು, ನನ್ನ ಕೊನೆ ಉಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದ್ದಾರೆ.