ನವದೆಹಲಿ :  ಬಿಜೆಪಿಯ ಭೀಷ್ಮ ಎಲ್. ಕೆ. ಅಡ್ವಾಣಿ 6 ಬಾರಿ ಗೆದ್ದಿರುವ ಲೋಕಸಭಾ ಕ್ಷೇತ್ರ ಗುಜರಾತ್‌ನ ಗಾಂಧಿನಗರ. 

ಕಳೆದ ಚುನಾವಣೆಯಲ್ಲೇ ಅವರು ಈ ಕ್ಷೇತ್ರಕ್ಕೆ ಸ್ವತಃ ‘ಕೇಳಿ’ ಟಿಕೆಟ್ ಪಡೆದುಕೊಳ್ಳುವಂತಾಗಿತ್ತು. ಈ ಬಾರಿ 91ನೇ ಇಳಿ ವಯಸ್ಸಿನಲ್ಲಿರುವ ಅವರಿಗೆ ಮತ್ತೆ ಟಿಕೆಟ್ ಸಿಗುತ್ತದೆಯೇ ಎಂಬುದು ಸದ್ಯಕ್ಕೆ ಸಸ್ಪೆನ್ಸ್. 

75 ವರ್ಷ ದಾಟಿದವರನ್ನು ಸಕ್ರಿಯ ರಾಜಕಾರಣದಿಂದ ದೂರವಿಡುವ ಬಿಜೆಪಿಯ ಅಲಿಖಿತ ನಿಯಮ ಈ ಬಾರಿ ಜಾರಿಗೆ ಬಂದರೆ ಮೊದಲೇ ಪಕ್ಷದಲ್ಲಿ ತೆರೆಮರೆಗೆ ಸರಿದಿರುವ ಅಡ್ವಾಣಿಗೆ ಟಿಕೆಟ್ ಸಿಗುವುದು ಕಷ್ಟ.