ಬೇಹುಗಾರಿಕೆ ಆರೋಪದಡಿ ಭಾರತೀಯ ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನ ಗಲ್ಲು ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯ ವಿಳಂಬ ಧೋರಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಐವರು ಭಾರತೀಯರು ಶಿಕ್ಷೆ ಜಾರಿಗೂ ಮೊದಲೇ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಅಂಥವರ ಸಾಲಿಗೆ ಜಾಧವ್‌ ಕೂಡ ಸೇರಿಬಿಡುತ್ತಾರಾ ಎಂಬ ಆತಂಕ ವ್ಯಕ್ತವಾಗತೊಡಗಿದೆ.
1 ಸರಬ್ಜಿತ್ ಸಿಂಗ್
1990ರಲ್ಲಿಗೊತ್ತಿಲ್ಲದೆ ಗಡಿ ದಾಟಿ ಹೋಗಿದ್ದ ಪಂಜಾಬ್ ಮೂಲದ ರೈತ ಸರಬ್ಜಿತ್ ಸಿಂಗ್ರನ್ನುಭಯೋತ್ಪಾದನೆ ಹಾಗೂ ಬೇಹುಗಾರಿಕೆ ಆರೋಪ ದಲ್ಲಿ ಪಾಕಿಸ್ತಾನ ಬಂಧಿಸಿತ್ತು. 1991ರಲ್ಲಿಲಾಹೋರ್ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. 22 ವರ್ಷವಾ ದರೂ ಜಾರಿಯಾಗಿರಲಿಲ್ಲ. 2013ರಲ್ಲಿ ಸಹ ಕೈದಿಗಳು ಸರಬ್ಜಿತ್ರನ್ನು ಜೈಲಿನಲ್ಲೇ ಹತ್ಯೆ ಮಾಡಿದ್ದರು.
2 ಕಿರ್ಪಾಲ್ ಸಿಂಗ್
ವಾಘಾಗಡಿ ದಾಟಿದ್ದಕ್ಕೆ ಪಂಜಾಬ್ನ ಗುರುದಾಸ್ಪುರದ ಕಿರ್ಪಾಲ್ ಅವರನ್ನು ಪಾಕಿಸ್ತಾನ 1992ರಲ್ಲಿ ಬಂಧಿಸಿತ್ತು. ಬೇಹುಗಾರಿಕೆ ಹಾಗೂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು. 25 ವರ್ಷ ವಾದರೂ ಶಿಕ್ಷೆ ಜಾರಿಯಾಗಲಿಲ್ಲ. ಲಾಹೋರ್ ಜೈಲಿನಲ್ಲೇನಿಧನ ಹೊಂದಿದರು.
3 ಚಮೇಲ್ ಸಿಂಗ್
ಜಮ್ಮುವಿನಲ್ಲಿ 2008ರಲ್ಲಿ ನಾಪತ್ತೆಯಾದ ಚಮೇಲ್ ಸಿಂಗ್ನನ್ನು ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನಬಂಧಿಸಿತ್ತು. ಪಾಕಿಸ್ತಾನ ನೀಡಿದ ಚಿತ್ರ ಹಿಂಸೆಯಿಂ ದಾಗಿ ನಾಲ್ಕು ವರ್ಷಗಳ ಹಿಂದೆಚಮೇಲ್ ಸಿಂಗ್ ಅವರು ಸಾವನ್ನಪ್ಪಿದ್ದರು.
4 ಕಿಶೋರ್ ಭಗವಾನ್
ಭಾರತೀಯ ಮೀನುಗಾರರಾಗಿದ್ದ ಭಗವಾನ್ರನ್ನು ಪಾಕಿಸ್ತಾನ ಬಂಧಿಸಿ ಜೈಲಿನಲ್ಲಿಟ್ಟಿತ್ತು. 2014ರಲ್ಲಿ ಅವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.
5 ಝಾಕೀರ್ ಮುಮ್ತಾಜ್
ಅಕ್ರಮವಾಗಿ ಗಡಿಯೊಳಕ್ಕೆ ನುಸುಳಿದ ಆರೋಪದಲ್ಲಿ ಪಾಕಿಸ್ತಾನದಿಂದ 2011ರಲ್ಲಿ ಬಂಧಿತರಾಗಿದ್ದರು. ಹೃದಯಾಘಾತಕ್ಕೆ ಬಲಿಯಾದರು.
