ಭಾರತ-ಉಗಾಂಡಾ ವ್ಯಾಪಾರ ಸಮತೋಲನ ಸಾಧ್ಯಉಗಾಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಭಾರತ-ಉಗಾಂಡಾ ವ್ಯಾಪಾರ ಒಕ್ಕೂಟದಲ್ಲಿ ಮೋದಿಸೂಕ್ತ ಕಾರ್ಯತಂತ್ರದಿಂದ ಗರಿಷ್ಠ ವ್ಯಾಪಾರ ಸಾಧ್ಯ
ಕಂಪಾಲಾ(ಜು.25): ಉಗಾಂಡಾದೊಂದಿಗೆ ವ್ಯಾಪಾರ ಸಮತೋಲನಕ್ಕಾಗಿ ಇನ್ನೂ ಹೆಚ್ಚಿನ ದಾರಿ ಕ್ರಮಿಸಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ -ಉಗಾಂಡಾ ವ್ಯಾಪಾರ ಒಕ್ಕೂಟದಲ್ಲಿ ಮಾಧ್ಯಮಗಳು ಮತ್ತು ಇತರ ನಿಯೋಗದೊಂದಿಗೆ ಮಾತನಾಡಿದ ಮೋದಿ, ಭಾರತ ಮತ್ತು ಉಗಾಂಡ ನಡುವಿನ ವ್ಯಾಪಾರದಲ್ಲಿ ಅಸಮತೋಲನ ಇದೆ ಎಂದು ಉಗಾಂಡಾ ಅಧ್ಯಕ್ಷರು ಹೇಳಿದ್ದಾರೆ. ಈ ಅಸಮಾತೋಲನ ತಪ್ಪಿಸಲು 10 ಕ್ರಮಗಳ ಜೊತೆಗೆ ತಾವಿಲ್ಲಿ ಬಂದಿರುವುದಾಗಿ ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಗರಿಷ್ಠ ಪ್ರಮಾಣದಲ್ಲಿದ್ದರೂ, ಗರಿಷ್ಠ ಅನುಕೂಲ ಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸೂಕ್ತ ಕಾರ್ಯತಂತ್ರ ಅನುಸರಿಸಿದರೆ ಎರಡೂ ರಾಷ್ಟ್ರಗಳು ಮತ್ತಷ್ಟು ಸಮೀಪ ಬರಲು ಸಾಧ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ್ದು ನೀತಿ ಆಧಾರಿತ ಆಡಳಿತವಾಗಿದ್ದು, ಅಲ್ಲಿನ ತೆರಿಗೆ ಸ್ಥಿರತೆಯಿಂದ ಯಾರೂ ಬೇಕಾದರೂ ಹೂಡಿಕೆ ಮಾಡಬಹುದು. ಭಾರತದ ಆರ್ಥಿಕತೆ ವೇಗವಾಗಿ ಬೆಳೆವಣಿಗೆಯಾಗುತ್ತಿದ್ದು, ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ಮೋದಿ ಹೇಳಿದರು.
ಉಗಾಂಡಾದಲ್ಲಿ ಭಾರತೀಯರ ಮೇಲೆ ಇರುವ ಪ್ರೀತಿಗಾಗಿ ಅಧ್ಯಕ್ಷ ಯೊವೇರಿ ಮ್ಯೂಸೆವಿನಿ ಅವರನ್ನು ಅಭಿನಂದಿಸುವುದಾಗಿ ಹೇಳಿದ ಪ್ರಧಾನಿ, ಉಗಾಂಡಾದಲ್ಲಿ ಉತ್ತಮವಾದ ಭೂಮಿ ಇದೆ. ಸಾವಯವ ಕೃಷಿ ಉತ್ಪನ್ನಗಳಿಗಾಗಿ ಡೊಡ್ಡ ಮಾರುಕಟ್ಟೆಗಳಿವೆ. ಇಲ್ಲಿ ರಾಸಾಯನಿಕ ಮಿಶ್ರಣವಿಲ್ಲದೆ ಉತ್ತಮ ಮಣ್ಣಿದ್ದು, ಭಾರತ ಯುವ ಜನರೊಂದಿಗೆ ಅನ್ವೇಷಣೆ ಕಡೆಗೆ ಉಗಾಂಡಾ ಯುವ ಜನತೆ ತೊಡಗಿಸಿಕೊಳ್ಳುವಂತೆ ಮೋದಿ ಕರೆ ನೀಡಿದರು.
