ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ದೇಗುಲವನ್ನು ತೆರೆಯಲಾಗಿದ್ದು ಈ ವೇಳೆ ಅನೇಕ ಮಹಿಳಾ ಭಕ್ತರು ಅಯ್ಯಪ್ಪ ದರ್ಶನ ಪಡೆಯುವ ಯತ್ನದಲ್ಲಿದ್ದಾರೆ. ಮಹಿಳಾ  ಹೋರಾಟಗಾರ್ತಿ ತೃಪ್ತಿ ದೇಸಾಯಿ ದೇಗುಲ ಪ್ರವೇಶಕ್ಕೆಂದು ಕೇರಳಕ್ಕೆ ತೆರಳಿ ದರ್ಶನ ಪಡೆಯದೇ ವಾಪಸಾಗಿದ್ದು ಮುಂದಿನ ಬಾರಿ ದರ್ಶನ ಪಡೆದೇ ತೀರುವುದಾಗಿ ಹೇಳಿದ್ದಾರೆ. 

ತಿರುವನಂತಪುರ :  ಶಬರಿಮಲೆ ದೇಗುಲ ಪ್ರವೇಶಿಲು ತೆರಳಿ ದೇಗುಲ ಪ್ರವೇಶಿಸದೇ ವಾಪಸಾದ ತೃಪ್ತಿ ದೇಸಾಯಿ ಮುಂದಿನ ಬಾರಿ ಶಬರಿಮಲೆಗೆ ತೆರಳಲು ಯಾವುದೇ ರೀತಿಯ ಮುನ್ಸೂಚನೆಯನ್ನೂ ಕೂಡ ನೀಡದೇ ಗೆರಿಲ್ಲ ತಂತ್ರವನ್ನು ಬಳಸಿ ದೇಗುಲಕ್ಕೆ ತೆರಳುವುದಾಗಿ ಹೇಳಿದ್ದಾರೆ. 

ದೇಗುಲ ಪ್ರವೇಶಿಸುವ ಸಲುವಾಗಿಯೇ ಕೇರಳಕ್ಕೆ ತೆರಳಿದ್ದ ಅವರಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಶಬರಿಮಲೆಗೆ ತೆರಳಲು ಯಾವುದೇ ಟ್ಯಾಕ್ಸಿ ಸೇರಿದಂತೆ ವಾಹನ ಸೌಕರ್ಯ ದೊರಕಿರಲಿಲ್ಲ. 

ಇದರಿಂದ ನಿರಾಶರಾಗಿ ತೃಪ್ತಿ ದೇಸಾಯಿ ಹಾಗೂ ಅವರ ಬೆಂಬಲಿಗರು ಮರಳಿದ್ದರು. ಆದರೆ ಮುಂದಿನ ಬಾರಿ ಪೊಲೀಸರು ದೇಗುಲಕ್ಕೆ ತೆರಳಲು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ಸುಳಿವನ್ನೂ ಕೂಡ ನೀಡದೇ ಅಯ್ಯಪ್ಪನ ದರ್ಶನ ಪಡೆಯುವುದಾಗಿ ಹೇಳಿದ್ದಾರೆ. 

ದೇಗುಲಕ್ಕೆ ತೆರಳಲು ಕೇರಳಕ್ಕೆ ಹೋದಾಗ ಅನೇಕ ರೀತಿಯಲ್ಲಿ ಪ್ರತಿಭಟನೆ ನಡೆಯಿತು. 50 ವರ್ಷದ ಒಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ವಿರೋಧಿಸಿ ವಿವಿಧ ಸಂಘಟನೆಗಳು ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿವೆ.