ಕೋಲಾರ [ಜು.08] : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಶಾಸಕರ ರಾಜೀನಾಮೆ ಬೆನ್ನಲ್ಲೇ ಹಲವು ಶಾಸಕರು ರಾಜಿನಾಮೆ ನೀಡಿದ್ದಾರೆ.  ಈ ನಡುವೆ ತಾವು ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ. 

ರಾಜ್ಯದ ರಾಜಕೀಯ ಬೆಳವಣಿಗೆ ಹಿಂದೆ ಬಿಜೆಪಿ ಕೈವಾಡ ಇದ್ದು, ಹಿಂದೆ ನನಗೂ ಬಿಜೆಪಿಯಿಂದ 5 ಕೋಟಿ ರು. ಆಫರ್ ನೀಡಿದ್ದರು ಎಂದು ಹೊಸ ಬಾಂಬ್ ಸ್ಫೋಟಿಸಿದ್ದಾರೆ. 

ಸದ್ಯ 13 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಜೊತೆಗೆ ಹೋಗಿದ್ದಾರೆ. ಆದರೆ ಇದರಿಂದ ಸರ್ಕಾರಕ್ಕೆ ಸಮಸ್ಯೆಯಾಗಲ್ಲ. ಕುಮಾರಸ್ವಾಮಿ ಸಿಎಂ ಆಗಿ ಮುಂದುವರಿಯುತ್ತಾರೆ ಎಂದರು. 

ಇನ್ನು ಇತ್ತೀಚೆಗಷ್ಟೇ ಸಚಿವ ಸ್ಥಾನ ಪಡೆದುಕೊಂಡಿದ್ದ ನಾಗೇಶ್ ರಾಜೀನಾಮೆ ನೀಡಿ ತೆರಳಬಾರದಿತ್ತು. ಮಂತ್ರಿಗಿರಿ ಬದಲು ಇನ್ನೇನು ಕೊಡಲು ಸಾಧ್ಯವಿದೆ ಎಂದು ಪ್ರಶ್ನೆ ಮಾಡಿದರು. 

ಆಪರೇಷನ್ ಕಮಲಕ್ಕೆ ನಮ್ಮವರು ಬಿದ್ದು ಹೋಗುತ್ತಿದ್ದಾರೆ. ಈ ಬೆಳವಣಿಗೆಗಳ ಹಿಂದೆ ಸಿದ್ದರಾಮಯ್ಯ ಕೈವಾಡವಿಲ್ಲ. ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆದರೆ ಒಳ್ಳೆಯದು. ಇನ್ನು ವಿಶ್ವನಾಥ್ ರಾಜೀನಾಮೆ ನೀಡಿದರುವುದನ್ನು ನಂಬಲು ಆಗುತ್ತಿಲ್ಲ ಎಂದು ಶ್ರೀನಿವಾಸ್ ಗೌಡ ಹೇಳಿದರು.