ಮಂಡ್ಯ (ಸೆ.16): ಕಾವೇರಿ ನೀರು ಹೋರಾಟದ ಮುಂದಿನ ರೂಪುರೇಷೆ ರಚಿಸಲು ಮಂಡ್ಯದಲ್ಲಿ ಜಿಲ್ಲಾ ಪ್ರತಿನಿಧಿಗಳ ಸಭೆ ಅಂತ್ಯಗೊಂಡಿದೆ. 
ಈ ವೇಳೆ ಮಾತನಾಡಿದ ಮಾಜಿ ಸಂಸದ ಮಾದೇಗೌಡ, ಸಮಸ್ಯೆ ಬಗೆಹರಿಯುವವರೆಗೂ ಇದೇ ರೀತಿ ಹೋರಾಟ ಮುಂದುವರಿಯುವುದು ಎಂದು ಹೇಳಿದ್ದಾರೆ. 
20ನೇ ತಾರೀಕು ಟ್ರಿಬ್ಯೂನಲ್ ಆದೇಶ ನೋಡಿಕೊಂಡು ಮುಂದಿನ ಹೋರಾಟ ತೀರ್ಮಾನ ಮಾಡುತ್ತೇವೆ ಎಂದು ಮಾದೇಗೌಡ ಹೇಳಿದ್ದಾರೆ. 
ಇದೇ ಸಂದರ್ಭದಲ್ಲಿ ಅಂಬರೀಷ್ ಗೈರು ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಮಾದೇಗೌಡರು, ಅಂಬರೀಷ್ ನಮ್ಮ ದೇಶದಲ್ಲೇ ಇಲ್ಲವಲ್ಲಾ, ದೇಶವನ್ನೇ ಬಿಟ್ಟು ಹೋಗಿದ್ದಾರೆ. ಅಂಬರೀಷ್ ಎಲ್ಲಿದ್ದಾರೆ ಅಂತಾ ನೀವೇ ಮಾಧ್ಯಮದವರೇ ಹೇಳಬೇಕು ಅಂತಾ ಕಿಡಿಕಾರಿದ್ದಾರೆ.