ತಮಿಳುನಾಡು ದಿ. ಮುಖ್ಯಮಂತ್ರಿ ಜಯಲಲಿತಾ ಸೋದರ ಸಂಬಂಧಿ ದೀಪಾ ಜಯಕುಮಾರ್ ಜಯಲಲಿತಾ ಕ್ಷೇತ್ರ ಆರ್.ಕೆ ನಗರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಚೆನ್ನೈ (ಫೆ.24): ತಮಿಳುನಾಡು ದಿ. ಮುಖ್ಯಮಂತ್ರಿ ಜಯಲಲಿತಾ ಸೋದರ ಸಂಬಂಧಿ ದೀಪಾ ಜಯಕುಮಾರ್ ಜಯಲಲಿತಾ ಕ್ಷೇತ್ರ ಆರ್.ಕೆ ನಗರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
“ಜಯಲಲಿತಾರ ವಿಧಾನಸಭಾ ಕ್ಷೇತ್ರ ಆರ್.ಕೆ ನಗರದಿಂದ ನಾನು ಸ್ಪರ್ಧಿಸಬೇಕೆಂಬುದು ಜನರ ಒತ್ತಾಸೆಯಾಗಿದೆ. ಅವರ ಕರೆಗೆ ಓಗೊಟ್ಟು ನಾನು ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.
ತಮಿಳುನಾಡಿನ ಜನತೆ ನನ್ನ ಮೇಲಿಟ್ಟಿರೋ ಆಕಾಂಕ್ಷೆಗಳನ್ನು ನಾನು ಈಡೇರಿಸುತ್ತೇನೆ ಎಂದು ದೀಪಾ ಭರವಸೆ ವ್ಯಕ್ತಪಡಿಸಿದರು.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪಳನೀಸ್ವಾಮಿ ಈ ರೀತಿ ಅಧಿಕಾರ ಸ್ವೀಕರಿಸಿರುವುದು ಸರಿಯಲ್ಲ. ಅಣ್ಣಾ ಡಿಎಂಕೆ ಪಕ್ಷದ ಕಾರ್ಯಕರ್ತರನ್ನು ಹೈಜಾಕ್ ಮಾಡಿ ರೆಸಾರ್ಟ್ ರಾಜಕಾರಣ ಮಾಡಿರುವುದು ಯಾರೊಬ್ಬರೂ ಒಪ್ಪತಕ್ಕ ವಿಚಾರವಲ್ಲ. ಅವರ ಆಶಯಗಳನ್ನು ಕಡೆಗಣಿಸಿ ಒತ್ತಾಯಪೂರ್ವಕವಾಗಿ ಬಹುಮತ ಸಾಬೀತುಪಡಿಸಿಕೊಂಡಿರುವುದು ಸರಿಯಲ್ಲ ಎಂದು ದೀಪಾ ಜಯಕುಮಾರ್ ಆರೋಪಿಸಿದ್ದಾರೆ.
