ಪಾಟ್ನಾ :  ಲೋಕಸಭಾ ಚುನಾವಣೆ  ಸಮೀಪಿಸುತ್ತಿದ್ದು ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ.  ಜೆಡಿಯು ಕೂಡ ಚುನಾವಣೆ ಚುನಾವಣಾ ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದೆ. 

ಇನ್ನು ಬಿಜೆಪಿಯೊಂದಿಹೆ ಬಿಹಾರದಲ್ಲಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಜೆಡಿಯು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಕೆಸಿ ತ್ಯಾಗಿ ಹೇಳಿದ್ದಾರೆ.

ಅಲ್ಲದೇ ಬಿಜೆಪಿಗೆ 22ಕ್ಕಿಂತಲೂ ಅಧಿಕ ಸ್ಥಾನಗಳನ್ನು ಬಿಟ್ಟುಕೊಡುವುದಿಲ್ಲ ಎಂದು  ಹೇಳಿದರು. ಜೆಡಿಯು ಬಿಹಾರದಲ್ಲಿ ದೊಡ್ಡ ಪಕ್ಷವಾಗಿದೆ. ನಿತೀಶ್  ಕುಮಾರ್ ಕೆಲಸವೂ ಕೂಡ ಉತ್ತಮ ಪ್ರಮಾಣದಲ್ಲಿದೆ. 

ಬಿಜೆಪಿ ತಮ್ಮ ಕೆಲಸದ ಬಗ್ಗೆ ಪ್ರಚಾರ ಮಾಡಿಕೊಂಡಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನೂಕೂಲತೆ ಒದಗಲಿದೆ ಎಂದು ಇನ್ನೋರ್ವ ಮುಖಂಡ ಶ್ಯಾಮ್ ರಜಾಕ್ ಹೇಳಿದ್ದಾರೆ. 

ಈಗಾಗಲೇ ಜೆಡಿಯು ಹಾಗೂ ಬಿಜೆಪಿ ನಡುವೆ ವೈಮನಸ್ಯ ಮೂಡಿದೆ ಎನ್ನುವ ಬಗ್ಗೆ ಗಾಳಿಸುದ್ದಿಯೊಂದು ಹರಡುತ್ತಿದ್ದು, ಕಾಂಗ್ರೆಸ್ ಕೂಡ ಈ ಬಗ್ಗೆ ಆಪಾದನೆಯನ್ನು ಮಾಡಿದೆ. ಅಲ್ಲದೇ  ಜೆಡಿಯು ಮುಖಂಡರಿಗೆ ಬಿಜೆಪಿಯೊಂದಿಗೆ ಇರುವ ಇಚ್ಛೆ ಇಲ್ಲದಿದ್ದರೂ ಕೂಡ ಅದನ್ನು ತೋರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.