ಒರಾಯನ್ ಮಾಲ್ನಿಂದ ರಾಜಕಾಲುವೆ ಒತ್ತುವರಿ ಪ್ರಕರಣ ಸಂಬಂಧ ಮಲ್ಲೇಶ್ವರಂನ ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಸಮರ್ಪಣಾ ಸಂಸ್ಥೆ ಮುಖ್ಯ ಕಾರ್ಯದರ್ಶಿ ಶಿವಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು(ಡಿ.22): ಒರಾಯನ್ ಮಾಲ್ನಿಂದ ರಾಜಕಾಲುವೆ ಒತ್ತುವರಿ ಪ್ರಕರಣ ಸಂಬಂಧ ಮಲ್ಲೇಶ್ವರಂನ ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಸಮರ್ಪಣಾ ಸಂಸ್ಥೆ ಮುಖ್ಯ ಕಾರ್ಯದರ್ಶಿ ಶಿವಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದೆ.
ಒರಾಯನ್ ಮಾಲ್ನಿಂದ 3.3 ಒತ್ತುವರಿಯಾಗಿದ್ದು, ಕೋರ್ಟ್ ಆದೇಶ ನೀಡಿದರೂ ವಿಚಾರಣೆ ನಡೆಸದಿದ್ದಕ್ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ರು. ಕೋರ್ಟ್ಗೆ ಬಂದು ಉತ್ತರ ನೀಡಿ ಅಂತ ಹೇಳಿ ವಿಚಾರಣೆಯಿಂದ ಹೊರನಡೆದ ಪ್ರಸಂಗ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ , ಒರಾಯನ್ ಹಾಗೂ ಇಟಿಎ ಮಾಲ್'ನಿಂದ ಅಗತ್ಯ ದಾಖಲೆ ಸಲ್ಲಿಕೆಯಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಸರ್ವೆ ಮಾಡಲಾಗಿದೆ. ಎಲ್ಲರೂ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
