ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ತಮಗೆ ದಿಲ್ಲಿಯಲ್ಲಿ ನೀಡಲಾಗಿರುವ ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಬೇಕಾಗಬಹುದು.

ನವದೆಹಲಿ: ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ ಸಿಂಗ್ ಹಾಗೂ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ತಮಗೆ ದಿಲ್ಲಿಯಲ್ಲಿ ನೀಡಲಾಗಿರುವ ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಬೇಕಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಪ್ರೀಂ ಕೋರ್ಟ್‌ಗೆ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಈ ಕುರಿತು ವರದಿ ಸಲ್ಲಿಸಿದ್ದು, ವರದಿಯನ್ನು ಕೋರ್ಟು ಒಪ್ಪಿಕೊಂಡು ಆದೇಶ ಹೊರಡಿಸಿದರೆ ಬಂಗಲೆಯನ್ನು ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳು ತೆರವು ಮಾಡಬೇಕಾಗಿ ಬರಬಹುದು ಎಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಆಗಸ್ಟ್ 23ರಂದು ರಂಜನ್ ಗೊಗೋಯ್ ಮತ್ತು ನವೀನ್ ಸಿನ್ಹಾ ಅವರು ಗೋಪಾಲ್ ಸುಬ್ರಮಣಿಯಂ ಅವರನ್ನು ನ್ಯಾಯಾಲಯದ ಸಲಹೆಗಾರರೆಂದು ನೇಮಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ‘ಲೋಕ ಪ್ರಹರಿ’ ಎಂಬ ಎನ್‌ಜಿಒ, ಅತಿಗಣ್ಯ ಮಾಜಿಗಳಿಗೆ ಸರ್ಕಾರಿ ಬಂಗಲೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಈ ಕ್ರಮ ಜರುಗಿಸಿತ್ತು.

‘ಉಚ್ಚ ಸಾಂವಿ ಧಾನಿಕ ಹುದ್ದೆ ಯಲ್ಲಿದ್ದ ವ್ಯಕ್ತಿಗಳು ಅಧಿಕಾರ ಕಳೆದು ಕೊಂಡ ಬಳಿಕ ಸಾಮಾನ್ಯ ಖಾಸಗಿ ನಾಗರಿಕರೇ ಆಗುತ್ತಾರೆ. ಹುದ್ದೆಯಲ್ಲಿದ್ದಾಗ ಇರುವ ಸವಲತ್ತುಗಳನ್ನು ಪದತ್ಯಾಗದ ಬಳಿಕ ಕಳೆದುಕೊಳ್ಳುತ್ತಾರೆ.

ಹೀಗಾಗಿ ಅವರಿಗೆ ಅಧಿಕೃತ ಬಂಗಲೆ ನೀಡುವ ಅಗತ್ಯವಿಲ್ಲ’ ಎಂದು ಸುಬ್ರಮಣಿಯಂ ಅವರು ವರದಿಯಲ್ಲಿ ಹೇಳಿದ್ದಾರೆ. ಹೀಗಾಗಿ ಕೋರ್ಟು ಸುಬ್ರಮಣಿಯಂ ಅವರ ವರದಿ ಅಂಗೀಕರಿಸಿದರೆ ದೇವೇಗೌಡರು ಸೇರಿದಂತೆ ಮಾಜಿ ಪ್ರಧಾನಿಗಳು ಹಾಗೂ ಮಾಜಿ ರಾಷ್ಟ್ರಪತಿಗಳು ಬಂಗಲೆ ಕಳೆದುಕೊಳ್ಳುವ ಸಂಭವವಿದೆ.