ಅಹಿಂದಾ ಯೋಜನೆಗೆ ಸರ್ಕಾರ ಕೈಗೊಂಡ ಕ್ರಮಗಳು ಸರ್ಕಾರದ ನೆರವಿಗೆ ಬರುತ್ತದೆ – ಶೇ. 21ಒಂದಷ್ಟು ಪ್ರಮಾಣದಲ್ಲಿ ಅಹಿಂದಾ ಯೋಜನೆಗಳು ಸಹಾಯವಾಗಲಿವೆ – ಶೇ. 34ಇತರೆ ವರ್ಗಗಳಿಂದ ತಿರುಗುಬಾಣವಾಗಿ ಪರಿಣಮಿಸಲಿವೆ – ಶೇ. 28ಈ ಬಗ್ಗೆ ನಮಗೆ ಏನು ತಿಳಿದಿಲ್ಲ – ಶೇ. 11ಅದರಿಂದಾಗುವ ಲಾಭಗಳ ಬಗ್ಗೆ ಮಾಹಿತಿ ಇಲ್ಲ – ಶೇ. 06

ಬೆಂಗಳೂರು(ಡಿ.6): ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರನ್ನು ಒಳಗೊಂಡ ಅಹಿಂದ ವರ್ಗದ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಲ್ಯಾಪ್‌ಟಾಪ್ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆತಂದಿದೆ.

ಎಸ್ಸಿ-ಎಸ್ಟಿ ವರ್ಗದವರಿಗೆ ಬಜೆಟ್‌’ನಲ್ಲಿ ಹಣ ಮೀಸಲು ಸೇರಿದಂತೆ ಅಹಿಂದ ಓಲೈಕೆಗಾಗಿ ನಾಲ್ಕೂವರೆ ವರ್ಷಗಳಲ್ಲಿ ಸಹಸ್ರಾರು ಕೋಟಿ ರು.ಗಳನ್ನು ಸಿದ್ದರಾಮಯ್ಯ ಸರ್ಕಾರ ವಿನಿಯೋಗಿಸಿದೆ.

ಹೀಗಾಗಿ ಸರ್ಕಾರಕ್ಕೆ ಅಹಿಂದ ಸರ್ಕಾರ ಎಂಬ ಟೀಕೆಗಳೂ ಇವೆ. ಆದಾಗ್ಯೂ ತಮಗೆ ಆ ಬಗ್ಗೆ ಮುಜುಗರವಿಲ್ಲ, ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟು ಕೊಂಡು ಯೋಜನೆ ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ.

ಸಿದ್ದು ಸರ್ಕಾರದ ಮರು ಆಯ್ಕೆ ಯಲ್ಲಿ ಅಹಿಂದ ಓಲೈಕೆ ಪೂರ್ಣ ಪ್ರಮಾಣ ದಲ್ಲಿ ಅಲ್ಲದಿದ್ದರೂ, ಒಂದಷ್ಟು ಮಟ್ಟಿಗಾ ದರೂ ನೆರವಿಗೆ ಬರುತ್ತದೆ ಎಂಬ ಸಾರ್ವತ್ರಿಕ ಅಭಿಪ್ರಾಯ ರಾಜ್ಯದಲ್ಲಿ ವ್ಯಕ್ತವಾಗಿದೆ.

ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಈ ಅಭಿಪ್ರಾಯ ಹೇಳಿದವರ ಸಂಖ್ಯೆ ಶೇ.50ರ ಗಡಿ ದಾಟಿರುವುದು ಗಮನಾರ್ಹ. ಆದರೆ ಕರಾವಳಿಯಲ್ಲಿ ಸರ್ಕಾರಕ್ಕೆ ಅಹಿಂದ ಓಲೈಕೆ ಎಂಬುದು ತಿರುಗುಬಾಣವಾಗಲಿದೆ ಎಂಬ ಸಂದೇಶ ವ್ಯಕ್ತವಾಗಿದೆ.