Asianet Suvarna News Asianet Suvarna News

‘ಬಂಗಾಳದ ಮಣ್ಣಿನ ರಸಗುಲ್ಲಾ ನನ್ನ ಪಾಲಿಗೆ ಪ್ರಸಾದ’ ದೀದಿಗೆ ಮೋದಿ ಏಟು

ನರೇಂದ್ರ ಮೋದಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನೀಡಿದ್ದ ಸಂದರ್ಶನ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.  ಆದರೆ ಆ ಸಂದರ್ಶನದಲ್ಲಿ ಆಡಿತ ಮಾತುಗಳು  ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿವೆ.

Will accept Mamata Didi s mud rasgullas like prasad PM Narendra Modi
Author
Bengaluru, First Published Apr 29, 2019, 7:16 PM IST

ನವದೆಹಲಿ[ಏ. 19]  ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾ,ಸಿಹಿತಿಂಡಿಯನ್ನು ನನಗೆ ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ಬಾಲಿವುಡ್ ನಟ ಅಕ್ಷಯ್​ ಕುಮಾರ್​ ಅವರೊಂದಿಗೆ ನಡೆದ ರಾಜಕಿಯೇತರ ಸಂದರ್ಶನದ ವೇಳೆ ಮೋದಿ ನೀಡಿದ್ದ ಹೇಳಿಕೆಯ ನಂತರದ ಘಟನಾವಳಿಗಳಿಗೆ ರಾಜಕಾರಣದ ವಾಸನೆ ಬಡಿದುಕೊಂಡಿದೆ.

ಮೋದಿ ಕಾಲೆಳೆಯಲು ರಮ್ಯಾ ಬಳಸಿದ್ದ ಹಿಟ್ಲರ್ ಪೋಟೋದ ಅಸಲಿ ಕತೆ ಇಲ್ಲಿದೆ!

ನಾನು ಪಶ್ಚಿಮ ಮಂಗಾಳದ ಮಣ್ಣಿನಿಂದ ತಯಾರಿಸಿದ್ದ ರಸಗುಲ್ಲಾ ಕಳುಹಿಸಬಲ್ಲೆ, ಆದರೆ ಎಂದಿಗೂ ಬಿಜೆಪಿ ಪರವಾಗಿ ನಿಲ್ಲಲಾರೆ ಎಂದು ಹೇಳಿದ್ದರು.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ಪಶ್ಚಿಮ ಬಂಗಾಳ ಮಹಾನ್ ಚೇತನಗಳ ಹುಟ್ಟಿಗೆ ಕಾರಣವಾದ ನಾಡು.  ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಸಾಧನೆಯ ನಾಡು. ಅಲ್ಲಿಯ ಮಣ್ಣು ಮತ್ತು ಕಲ್ಲಿನಿಂದ ತಯಾರಿಸಿದ ರಸಗುಲ್ಲಾವನ್ನು ಪ್ರಸಾದದ ರೀತಿ ಸ್ವೀಖರಿಸುತ್ತೇನೆ ಎಂದು ಹೇಳಿದ್ದಾರೆ.

ಒಂದು ಕಡೆ ಮಮತಾ ಬ್ಯಾನರ್ಜಿಗೆ ಭರ್ಜರಿ ತಿರುಗೇಟು  ನೀಡಿದ್ದರೆ ಇನ್ನೊಂದು ಕಡೆ  ಪಶ್ಚಿಮ ಬಂಗಾಳ ನೆಲವನ್ನು ಕೊಂಡಾಡಿದ್ದಾರೆ.

Follow Us:
Download App:
  • android
  • ios