ಕೊನೆಗೂ ಸಿಕ್ಕಿಬಿದ್ದ ವಿಕಿಲೀಕ್ಸ್ ಮುಖ್ಯಸ್ಥ ಜೂಲಿಯನ್ ಅಸ್ಸಾಂಜೆ| ಜೂಲಿಯನ್ ಅಸ್ಸಾಂಜೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಬ್ರಿಟಿಷ್ ಪೊಲೀಸರು| ಲಂಡನ್‌ನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಅಸ್ಸಾಂಜೆ| ಆಶ್ರಯ ಮುಂದುವರೆಸಲು ಈಕ್ವೆಡಾರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಧನ|

ಲಂಡನ್(ಏ.11): ವಿಕಿಲೀಕ್ಸ್ ಮೂಲಕ ವಿಶ್ವದ ಹಲವು ಸರ್ಕಾರಗಳ ಮತ್ತು ರಾಜಕೀಯ ನಾಯಕರ ನಿದ್ದೆಗೆಡೆಸಿದ್ದ ಜೂಲಿಯನ್ ಅಸ್ಸಾಂಜೆ ಅವರನ್ನು ಬಂಧಿಸುವಲ್ಲಿ ಬ್ರಿಟಿಷ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಜೂಲಿಯನ್ ಅಸ್ಸಾಂಜೆ ಅವರಿಗೆ ಈಕ್ವೆಡಾರ್ ಆಶ್ರಯ ಮುಂದುವರೆಸಲು ನಿರಾಕರಿಸಿದ ಮರುಕ್ಷಣವೇ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ.

Scroll to load tweet…

ವಿಕಿಲೀಕ್ಸ್ ಮೂಲಕ ಅಮೆರಿಕ ಸರ್ಕಾರದ ರಹಸ್ಯ ಮಾಹಿತಿಗಳನ್ನು ಮತ್ತು ವಿಶ್ವದ ಹಲವು ರಾಜಕಾರಣಿಗಳ ರಹಸ್ಯ ಸಂದರ್ಶನದ ಮೂಲಕ ಹಲವು ಆಘಾತಕಾರಿ ಸತ್ಯಗಳನ್ನು ಅಸ್ಸಾಂಜೆ ಹೊರಹಾಕಿದ್ದರು.

Scroll to load tweet…

2012ರಿಂದ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಜೂಲಿಯನ್ ಅಸ್ಸಾಂಜೆ ಅವರನ್ನು ಬಂಧಿಸಲು ಅಮೆರಿಕ ಸತತ ಪ್ರಯತ್ನ ನಡೆಸುತ್ತಲೇ ಇತ್ತು.