ಲಾಸ್‌ ಏಂಜಲೀಸ್[ಜು.27]: ಅಮೆರಿಕಾದ ಸಿಯಾಮಿಯಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬೇರೊಬ್ಬ ಮಹಿಳೆಯನ್ನು ದಿಟ್ಟಿಸುತ್ತಿದ್ದ ಪತಿಗೆ, ಪತ್ನಿಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಪತ್ನಿಯ ಕೋಪಕ್ಕೆ ಲ್ಯಾಪ್ ಟಾಪ್ ಕೂಡಾ ಪೀಸ್ ಪೀಸ್ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಅಷ್ಟಕ್ಕೂ ವಿಮಾನದಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಈ ಘಟನೆ ಜುಲೈ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರದಂದು ಸಿಯಾಮಿಯಿಂದ ಲಾಸ್ ಏಂಜಲೀಸ್ ಗೆ ವಿಮಾನವೊಂದು ಟೇಕ್ ಆಫ್ ಮಾಡುವ ಹಂತದಲ್ಲಿತ್ತು. ಆದರೆ ಅದಕ್ಕೂ ಮೊದಲೇ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು ವಿಮಾನದಲ್ಲಿ ದಂಪತಿಯೊಂದು ಪ್ರಯಾಣಿಸುತ್ತಿದ್ದು. ಈ ವೇಳೆ ಪತಿರಾಯ ವಿಮಾನದಲ್ಲಿದ್ದ ಬೇರೆ ಯುವತಿಯರ ಕಡೆ ಕಳ್ಳ ನೋಟ ಹರಿಸಲಾರಂಭಿಸಿದ್ದ. ಇದು ಪತ್ನಿಯ ಗಮನಕ್ಕೆ ಬಂದಿದೆ. ಕೂಡಲೇ ತನ್ನ ಪತಿಯ ಮೇಲೆ ಆಕೆ ರೇಗಾಡಿದ್ದಾಳೆ. ಅಂತಿಮವಾಗಿ ಕೈಗೆ ಸಿಕ್ಕ ಲ್ಯಾಪ್ ಟಾಪ್ ನಿಂದಲೇ ಗಂಡನ ತಲೆಗೆ ರಭಸವಾಗಿ ಹೊಡೆದು ಆತನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾಳೆ. 

ಪ್ರಕರಣ ಸಂಬಂಧ ಮಾಹಿತಿ ನೀಡಿದ ಪೊಲೀಸರು ಮಹಿಳೆಯ ಹೆಸರು ಟಿಫಿನಿ ಮ್ಯಾಕ್ಮೋರೆ, ಆಕೆ ಮದ್ಯ ಸೇವಸಿ ಜಗಳ ಆರಂಭಿಸಿದ್ದಾಳೆ ಎಂದು ತಿಳಿಸಿದ್ದಾರೆ . ಗಂಡನ ಮೇಲೆ ಕಿರುಚಾಡುತ್ತಿದ್ದ ಹೆಂಡತಿಯನ್ನು ಗಗನ ಸಖಿಯರು ಶಾಂತಗೊಳಿಸಲು ಯತ್ನಿಸಿದ್ದಾರೆ. ಆದರೆ ಟಿಫಿನಿ ಧ್ವನಿ ಮತ್ತಷ್ಟು ಗಟ್ಟಿಗೊಳಿಸಿದಾಗ ಆಕೆಯ ಗಂಡ ಅಲ್ಲಿಂದ ಎದ್ದು ಹೊರಹೋಗಲು ಸಜ್ಜಾಗಿದ್ದಾನೆ. ಆದರೆ ಈ ವೇಳೆ ಟಿಫಿನಿ ಕೂಡಾ ಆತನನ್ನು ಹಿಂಬಾಲಿಸಿದ್ದು, ಕೈಯ್ಯಲ್ಲಿದ್ದ ಲ್ಯಾಪ್ ಟಾಪ್ ನಿಂದ ಆತನ ತಲೆಗೆ ಹೊಡೆದಿದ್ದಾಳೆ. ಸಾಲದೆಂಬಂತೆ ಮತ್ತೆ ಹಿಂಬಾಲಿಸಿರುವುದು ವಿಡಿಯೋದಲ್ಲಿ ನೋಡಬಹುದು. 

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಜೂಲಿಯಾ ಎಂಬಾಕೆ ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಜುಲೈ 22 ರಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.